ರಾಜ್ಯಆದಾಯ ಹೆಚ್ಚಿಸಿಕೊಂಡ ಚಾಮರಾಜನಗರ ಕೆಎಸ್ಆರ್ಟಿಸಿ ಉಪ ವಿಭಾಗ
ಚಾಮರಾಜನಗರ ಕೆಎಸ್ಆರ್ಟಿಸಿ ಉಪವಿಭಾಗವು 2019 ರಲ್ಲಿ ಅಧಿಕ ಲಾಭ ಗಳಿಸಿದೆ. ಚಾಮರಾಜನಗರ ಉಪ ವಿಭಾಗದ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ನಂಜನಗೂಡು ಘಟಕಗಳಿಂದ ಪ್ರತಿನಿತ್ಯ 540 ಬಸ್ಸುಗಳು ಕಾರ್ಯಾಚರಿಸುತ್ತಿದ್ದು ಪ್ರತಿದಿನ ಸರಾಸರಿ 50-52 ಲಕ್ಷ ರೂ. ಆದಾಯ ಗಳಿಸುತ್ತಿದೆ.