ಪ್ರಧಾನ ಸುದ್ದಿಬಡ್ತಿ ವಿವಾದ: ತಿಂಗಳಲ್ಲಿ ಪರಿಹಾರಕ್ಕೆ ನಿರ್ದೇಶನ
ಕರ್ನಾಟಕ ಲೋಕಸೇವಾ ಆಯೋಗದಿಂದ 1998 ರಲ್ಲಿ ನೇಮಕಗೊಂಡ ಕೆಎಎಸ್ ಅಧಿಕಾರಿಗಳ ಪೈಕಿ 13 ಮಂದಿಗೆ ಐಎಎಸ್ಗೆ ಬಡ್ತಿ ನೀಡುವ ಸಂಬಂಧ ಇನ್ನು ನಾಲ್ಕು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ)ಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.