ರಾಜ್ಯರಾಗಿಗೆ ಗ್ಲೋಬಲ್ ಬ್ರಾಂಡಿಂಗ್, ಈರುಳ್ಳಿ, ಆಲೂಗಡ್ಡೆಗೆ ಪ್ರೋತ್ಸಾಹ ಸ್ವಾಗತಾರ್ಹ: ಸಿಎಂ ಯಡಿಯೂರಪ್ಪ
“ಆತ್ಮನಿರ್ಭರ್ ಭಾರತ್” ಪ್ಯಾಕೇಜ್ ಮೂರನೇ ಹಂತದ ಘೋಷಣೆಗಳಲ್ಲಿ ಕೃಷಿ ವಲಯದಲ್ಲಿ ರಾಗಿಗೆ ಜಾಗತಿಕ ಮನ್ನಣೆ [ಗ್ಲೋಬಲ್ ಬ್ರಾಂಡಿಂಗ್] ದೊರಕಿಸಿಕೊಡಲು ನಿರ್ಧರಿಸಿರುವುದರಿಂದ ರಾಜ್ಯದ ರಾಗಿಗೆ ಬೇಡಿಕೆ ಹೆಚ್ಚಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.