ರಾಜ್ಯಕೊಪ್ಪಳ: ವಾರದಿಂದ ಪ್ರವಾಹ ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾಹಿ, ಕುರಿಗಳ ರಕ್ಷಣೆ
ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರೆದಿರುವಂತೆಯೇ ನದಿಗಳು ಉಕ್ಕಿ ಹರಿಯುತ್ತಿದ್ದು ಅತ್ತ ಕೊಪ್ಪಳದಲ್ಲಿ ಕುರಿ ಕಾಯಲು ಹೋಗಿ ಒಂದು ವಾರದಿಂದ ಪ್ರವಾಹಕ್ಕೆ ಸಿಲುಕಿದ್ದ ಕುರಿಗಾಹಿಗಳನ್ನು ಮತ್ತು ನೂರಾರು ಕುರಿಗಳನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.