ದೇಶಮಣಿಪುರದಲ್ಲಿ ಕುಕಿ ಉಗ್ರರ ಅಟ್ಟಹಾಸಕ್ಕೆ ಸೇನೆ ತಿರುಗೇಟು; 40 ಉಗ್ರರ ಎನ್ಕೌಂಟರ್: ಸಿಎಂ ಬಿರೇನ್ ಸಿಂಗ್ ಮಾಹಿತಿ
ಮೈಟಿ ಅಥವಾ ಮೀಟೈ ನಾಗರಿಕರು ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಮಣಿಪುರದಲ್ಲಿ ಕುಕಿ ಉಗ್ರರು ನಡೆಸುತ್ತಿರುವ ದಾಳಿ ಮುಂದುವರೆದಿರುವಂತೆಯೇ ಇತ್ತ ಸೇನೆ ಕೂಡ ದಿಟ್ಟ ಉತ್ತರ ನೀಡಿದ್ದು ಎನ್ಕೌಂಟರ್ ಕಾರ್ಯಾಚರಣೆಯಲ್ಲಿ ಕನಿಷ್ಠ 40 ಮಂದಿ ಉಗ್ರರನ್ನು ಹೊಡೆದುರುಳಿಸಿದೆ ಎಂದು ತಿಳಿದುಬಂದಿದೆ.