ರಾಜಕೀಯನಿವೃತ್ತಿ ಘೋಷಿಸಿದ್ದರೂ ಕುಂದಾಪುರ ಕ್ಷೇತ್ರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿಯೇ ಬಿಜೆಪಿಗೆ ಭರವಸೆ; ಗೆಲುವಿಗೆ ಕಾಂಗ್ರೆಸ್ ಶತಪ್ರಯತ್ನ
ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ನ ಬಿರುಸಿನ ಪ್ರಚಾರದ ನಡುವೆಯೇ ವೃತ್ತಿಯಲ್ಲಿ ಗುತ್ತಿಗೆದಾರರಾಗಿರುವ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಅವರ ಮುಂದಿರುವ ಸವಾಲು ಎಂದರೆ, ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತದಾರರ ಮೇಲೆ ಹಿಡಿತ ಸಾಧಿಸಿರುವುದು.