ಸಿನಿಮಾ ಸುದ್ದಿಹಿರಿಯ ನಟ ಕಿಲ್ಲರ್ ವೆಂಕಟೇಶ್ ಗೆ ಅನಾರೋಗ್ಯ, ಕಲಾವಿದನ ಬೆನ್ನಿಗೆ ನಿಂತ ಜಗ್ಗೇಶ್
ಸ್ಯಾಂಡಲ್ ವುಡ್ ಹಿರಿಯ ನಟ ಕಿಲ್ಲರ್ ವೆಂಕಟೇಶ್ ತೀವ್ರ ಅನಾರೋಗ್ಯಕ್ಕೀಡಾಗಿದ್ದಾರೆ. ಕನ್ನಡದಲ್ಲಿ ಇನ್ನೂರೈವತ್ತಕ್ಕೆ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ನಟ ಕಿಲ್ಲರ್ ವೆಂಕಟೇಶ್ ಯಕೃತ್ತು ವೈಫಲ್ಯ (ಲಿವರ್ ವೈಫಲ್ಯ) ದಿಂದ ಬಳಲುತ್ತಿದ್ದಾರೆ. ಸಾವು ಬದುಕಿನ ನಡುವೆ ಹೋರಾಟ ನಡೆಸಿರುವ ಅವರನ್ನು ಸಧ್ಯ ಬೆಂಗಳೂರಿನ ವಿಕ್ಟೋರಿಯಾ ಆಸ್ಪ್ತರೆಗೆ ದಾಖಲಿಸಲಾಗಿದೆ.