ರಾಜ್ಯಸುಪ್ರೀಂ ಕೋರ್ಟ್ ನಲ್ಲಿ ಕಾವೇರಿ ವಿವಾದ ಅರ್ಜಿ ವಿಚಾರಣೆ ಆರಂಭ: ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿದ ಸಿಎಂ, ಡಿಸಿಎಂ
ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆ ಮಳೆಯಾಗದಿರುವುದರಿಂದ ನಮ್ಮ ಡ್ಯಾಂಗಳಲ್ಲಿ ನೀರು ಬಹಳ ಕಡಿಮೆಯಾಗಿದೆ. ಬರ ಪರಿಸ್ಥಿತಿ ಕೂಡ ಉಂಟಾಗಬಹುದು. ನಮ್ಮಲ್ಲಿ ಈಗ 52 ಟಿಎಂಸಿ ನೀರು ಇದೆ, ಹೀಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.