ಕಾವೇರಿ ನದಿ ನೀರು

ತಮಿಳುನಾಡಿಗೆ ನೀರು ಬಿಡಲು CWRC ಆದೇಶ: ಮೇಲ್ಮನವಿ ಸಲ್ಲಿಸಲು ಶೀಘ್ರದಲ್ಲೇ ತೀರ್ಮಾನ; ಸಚಿವ ರಾಮಲಿಂಗಾ ರೆಡ್ಡಿ; Video
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾ ರೆಡ್ಡಿ, 15 ದಿನಗಳಲ್ಲಿ ಸುಮಾರು 4 ಟಿಎಂಸಿ (ಸಾವಿರ ಮಿಲಿಯನ್ ಘನ ಅಡಿ) ನೀರನ್ನು ಬಿಡುಗಡೆ ಮಾಡುವಂತೆ CWRC ಸೂಚನೆ ನೀಡಿದೆ. ಆದರೆ ಕರ್ನಾಟಕ ಈಗಾಗಲೇ ನೀರಿನ ಕೊರತೆಯನ್ನು ಎದುರಿಸುತ್ತಿದೆ ಎಂದು ಹೇಳಿದರು.

ಕಾವೇರಿ ನದಿ ನೀರು: ಇಂದು CWMA ನಿಂದ ವಾಸ್ತವ ಪರಿಸ್ಥಿತಿ ಪರಿಶೀಲನೆ
ಸಭೆಯಲ್ಲಿ ತಮಿಳುನಾಡು, ಜೂನ್ ತಿಂಗಳಿಗೆ ನಿಗದಿಪಡಿಸಲಾದ 9.19 ಸಾವಿರ ಮಿಲಿಯನ್ ಘನ ಅಡಿ (tmcft)ನೀರಿನ ತನ್ನ ಪಾಲಿನ ಉಳಿದ ಭಾಗವನ್ನು ಕರ್ನಾಟಕದ ಜಲಾಶಯಗಳಿಂದ ಬಿಡುಗಡೆ ಮಾಡುವಂತೆ ಒತ್ತಾಯಿಸುವ ನಿರೀಕ್ಷೆಯಿದೆ.

ಕೊಳಚೆ ನೀರಿನಿಂದ ಕಾವೇರಿ ನದಿ ಕಲುಷಿತ: ಮಂಡ್ಯ ಜಿಲ್ಲಾಧಿಕಾರಿಗೆ ಶಾಶ್ವತ ಪರಿಹಾರಕ್ಕೆ ಉಪ ಲೋಕಾಯುಕ್ತ ಸೂಚನೆ
ಶ್ರೀರಂಗಪಟ್ಟಣ ಪುರಸಭೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸುರಂಗ ಒಳಚರಂಡಿ (UGD) ನೀರಿನ ತ್ಯಾಜ್ಯವನ್ನು ನದಿಗೆ ಸೇರುವ ಮೊದಲು ಸಂಸ್ಕರಿಸಲು ಶ್ರೀರಂಗಪಟ್ಟಣದಲ್ಲಿ ಸರಿಯಾದ ಒಳಚರಂಡಿ ಸಂಸ್ಕರಣಾ ಘಟಕ (STP) ಇಲ್ಲ ಎಂದು ಉಪ ಲೋಕಾಯುಕ್ತರು ಹೇಳಿದ್ದಾರೆ.

ಕಾವೇರಿ ನದಿ ಮಲೀನತೆ, ನದಿ ಪಾತ್ರ ಒತ್ತುವರಿ ತಡೆಯಲು ತಂಡ ರಚನೆ: ಡಿಸಿಎಂ ಡಿ.ಕೆ ಶಿವಕುಮಾರ್
ವಿಶ್ವ ಜಲದಿನದ ಅಂಗವಾಗಿ ಒಂದು ಒಂದು ವಾರಗಳ ಕಾಲ ಜಲ ಸಂರಕ್ಷಣೆ ಅಭಿಯಾನ ನಡೆಯಲಿದೆ. ನೀರಿನ ದುರ್ಬಳಕೆ ತಡೆಗಟ್ಟಿ, ಸದ್ಬಳಕೆ ಮಾಡುವಂತೆ ಜಾಗೃತಿ ಮೂಡಿಸುವುದೇ ಕಾವೇರಿ ಆರತಿ ಉದ್ದೇಶ ಎಂದು ತಿಳಿಸಿದರು.

ಕಾವೇರಿ ಜಲ ವಿವಾದ: ಅಗತ್ಯಬಿದ್ದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ತಮಿಳು ನಾಡು ನಿರ್ಧಾರ
ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ತಮ್ಮ ರಾಜ್ಯದ ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ಕಾವೇರಿ ನೀರು ಬಿಡುಗಡೆಗೆ ನಕಾರ: ಕರ್ನಾಟಕ ಸರ್ಕಾರದ ವಿರುದ್ಧ ತಮಿಳುನಾಡು ರೈತರ ಪ್ರತಿಭಟನೆ!
ತಂಜಾವೂರಿನ ಜಿಲ್ಲಾಧಿಕಾರಿ ಕಟ್ಟಡದ ಪ್ರವೇಶ ದ್ವಾರದಲ್ಲಿ ರಾಷ್ಟ್ರೀಯ ದಕ್ಷಿಣ ಭಾರತದ ನದಿ ಜೋಡಣೆ ರೈತ ಸಂಘದ ಸದಸ್ಯರು ಕೈಯಲ್ಲಿ ಖಾಲಿ ಮಣ್ಣಿನ ಮಡಿಕೆಗಳೊಂದಿಗೆ ಧರಣಿ ನಡೆಸಿದರು.

ಕಾವೇರಿ ವಿವಾದ: ತಮಿಳುನಾಡಿಗೆ ಹರಿಯುತ್ತಿದ್ದ ನೀರಿನ ಮಟ್ಟ 3 ಸಾವಿರ ಕ್ಯೂಸೆಕ್'ಗೆ ಇಳಿಕೆ, ಸಿಡಬ್ಲ್ಯೂಆರ್'ಸಿ ಮೊರೆ ಹೋಗಲು ನೆರೆರಾಜ್ಯ ನಿರ್ಧಾರ!
ರಾಜ್ಯದಲ್ಲಿ ಪ್ರತಿ ಮಳೆಗಾಲಕ್ಕೂ ಕಾವೇರಿ ನೀರಿನ ವಿಚಾರವಾಗಿ ತಮಿಳುನಾಡು ಖ್ಯಾತೆ ತೆಗೆಯುತ್ತಲೇ ಇರುತ್ತದೆ. ಅಗತ್ಯಕ್ಕೆ ತಕ್ಕಂತೆ ಕಾವೇರಿ ನೀರು ಹರಿಸಿದರೂ ಇನ್ನೂ ಬೇಕು...ಇನ್ನೂ ಬೇಕು ಎನ್ನುವ ದುರಾಸೆ ಮಾತ್ರ ತಮಿಳುನಾಡು ಸರ್ಕಾರಕ್ಕೆ ಹೋಗಿಲ್ಲ. ಈ ಬಾರಿ ರಾಜ್ಯದಲ್ಲಿ ನಿರೀಕ್ಷಿತ ಮಳೆ ಬಾರದಿರುವುದರಿಂದ ಕಾವೇರಿ ಜಲಾಶಯದಲ್ಲಿ ನೀರಿನ ಶೇಕರಣೆ ಪ್ರಮಾಣ...

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ರಾಜ್ಯದ ಹಲವೆಡೆ ರೈತರ ಪ್ರತಿಭಟನೆ!
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಎಂಎ) ನಿರ್ದೇಶನ ಪಾಲಿಸಿ ಕರ್ನಾಟಕ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದ್ದಂತೆಯೇ ರಾಜ್ಯದ ದಕ್ಷಿಣ ಭಾಗಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಸರ್ಕಾರದ ಕ್ರಮದ ವಿರುದ್ಧ ವಿವಿಧ ರೈತ ಸಂಘಟನೆಗಳು ಕಾವೇರಿ ಹೃದಯ ಭಾಗವಾದ ಮೈಸೂರು, ಮಂಡ್ಯ ಮತ್ತು ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದವು.

ತಮಿಳುನಾಡಿಗೆ ಮತ್ತೆ 5 ದಿನ ನೀರು ಬಿಡಿ: ಕಾವೇರಿ ನಿಯಂತ್ರಣ ಸಮಿತಿ
ಕೆಆರ್'ಎಸ್ ಮತ್ತು ಕಬಿನಿ ಜಲಾಶಯದಿಂದ ತಮಿಳುನಾಡು ರಾಜ್ಯಕ್ಕೆ ಮತ್ತೆ ಐದು ದಿನ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಕಾವೇರಿ ನಿಯಂತ್ರಣ ಸಮಿತಿ ತಿಳಿಸಿದೆ ಎಂದು ಶುಕ್ರವಾರ ತಿಳಿದುಬಂದಿದೆ...

