ರಾಜ್ಯಗಡಿಕೇಶ್ವರದಲ್ಲಿ ಲಘು ಭೂಕಂಪನ: ಆತಂಕದಿಂದ ಗ್ರಾಮ ತೊರೆಯುತ್ತಿರುವ ಜನರು, ಕಾಳಜಿ ಕೇಂದ್ರ ತೆರೆದ ಅಧಿಕಾರಿಗಳು
ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಉಂಟಾಗುತ್ತಿರುವ ಭೂಕಂಪನದಿಂದ ಭಯಭೀತರಾಗಿದ್ದ ಜನರಿಗೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ಪ್ರಾರಂಭಿಸಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಹಸೀಲ್ದಾರ ಅಂಜುಮ ತಬ್ಸುಮ ಅವರು ಹೇಳಿದ್ದಾರೆ.