ವಿಶೇಷಬದುಕು ಕಟ್ಟಿಕೊಳ್ಳುವ ಮಹಿಳೆಯರಿಗೆ ಸ್ಫೂರ್ತಿ: ಶೂನ್ಯದಿಂದ ಸ್ವಾವಲಂಬನೆಯ ಕಡೆ ಸಾಗಿದ ಕೊಡಗು ಮಹಿಳೆಯರ ಯಶೋಗಾಥೆ!
ಅದು 2018ರ ಆಗಸ್ಟ್ ತಿಂಗಳು, ಬಾನಿನಲ್ಲಿ ಮೋಡ ಹೆಪ್ಪುಗಟ್ಟಿತ್ತು. ಇದ್ದಕ್ಕಿದ್ದಂತೆ ಧಾರಾಕಾರ ಮಳೆ, ಪ್ರವಾಹ, ಭೂಕುಸಿತ. ರಸ್ತೆಗಳೆಲ್ಲ ಹಾಳಾದವು. ಪ್ರವಾಹಕ್ಕೆ ಹಾನಿಗೀಡಾದ ಪ್ರದೇಶಗಳಲ್ಲಿ ಕೊಡಗು ಜಿಲ್ಲೆಯ ಕಾಲೂರು ಗ್ರಾಮ ಕೂಡ ಒಂದು.