ಕಾರ್ಮಿಕರ ಸಾವು

ಭೀಕರ: ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ 4 ಕಾರ್ಮಿಕರ ಸಾವು!
ಮುಂಬೈನಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರಲ್ಲಿ ನೀರಿನ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾಗ ನಾಲ್ವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಬಳ್ಳಾರಿ: ಜಿಂದಾಲ್ ಕಾರ್ಖಾನೆಯಲ್ಲಿ ನೀರಿನ ಟ್ಯಾಂಕ್ ಗೆ ಬಿದ್ದು ಮೂವರು ಕಾರ್ಮಿಕರ ಸಾವು
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಬಳಿ ಇರುವ ಜಿಂದಾಲ್ ಉಕ್ಕಿನ ಕಾರ್ಖಾನೆಯ ನೀರಿನ ಹೊಂಡದಲ್ಲಿ ಬಿದ್ದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.

ವಿಜಯಪುರ: ಮೆಕ್ಕೆಜೋಳ ಗೋದಾಮಿನ ಕೊಠಡಿ ಕುಸಿತ, 7 ಕಾರ್ಮಿಕರ ಶವ ಹೊರಕ್ಕೆ, ಓರ್ವನ ರಕ್ಷಣೆ
ನಗರದ ಕೈಗಾರಿಕಾ ಪ್ರದೇಶದ ಖಾಸಗಿ ಗೋದಾಮಿನಲ್ಲಿ ಜೋಳದ ಚೀಲಗಳ ಬೃಹತ್ ರಾಶಿಯಡಿ ಸಿಲುಕಿ 7 ಕಾರ್ಮಿಕರು ಮೃತಪಟ್ಟಿದ್ದು, ಓರ್ವ ಕಾರ್ಮಿಕ ಪಾರಾಗಿದ್ದಾರೆ. ರಕ್ಷಣಾ ಕಾರ್ಯ ಬಹುತೇಕ ಮುಕ್ತಾಯಗೊಂಡಿದೆ.

ನೊಯ್ಡಾ ಲಿಫ್ಟ್ ಕುಸಿತ ದುರಂತ: ಮತ್ತೆ ನಾಲ್ವರು ಕಾರ್ಮಿಕರ ಸಾವು, ಮೃತರ ಸಂಖ್ಯೆ 8ಕ್ಕೆ ಏರಿಕೆ
ನೊಯ್ಡಾ ಎಕ್ಟೆನ್ಷನ್ ನಲ್ಲಿ ನಿರ್ಮಾಣ ಹಂತದಲ್ಲಿರುವ ಸೊಸೈಟಿಯಲ್ಲಿ ಸರ್ವಿಸ್ ಲಿಫ್ಟ್ ಕುಸಿದು ಬಿದ್ದು ಅದರಲ್ಲಿ ಸಿಕ್ಕಿಹಾಕಿಕೊಂಡು ತೀವ್ರ ಗಾಯಗೊಂಡಿದ್ದ ಮತ್ತೆ ನಾಲ್ವರು ಕಾರ್ಮಿಕರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಮೂಲಕ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.

