ವಿಶೇಷಕಾಫಿ ಹೀರುತ್ತಾ, ಐಸ್ ಕ್ರೀಂ ಸವಿಯುತ್ತಾ ಪೇಂಟಿಂಗ್ ಮಾಡುತ್ತಾ ಕಥೆ-ಕಾದಂಬರಿ ಓದಬಹುದು: ಇದು ಗದಗದಲ್ಲಿರುವ 'ಆರ್ಟ್ ಅಡ್ಡಾ'!
ಸುಂದರವಾದ ವರ್ಣಚಿತ್ರಗಳು ಮತ್ತು ಕಲಾಕೃತಿಗಳನ್ನು ಹೊಂದಿರುವ ಕೋಣೆಗಳು, ಜನರು ಕಾದಂಬರಿಗಳನ್ನು ಓದುವುದು, ಕಲೆಗಳ ಬಗ್ಗೆ ಚರ್ಚೆ ನಡೆಸುವುದು, ಕಾಫಿ ಹೀರುವುದು, ಐಸ್ ಕ್ರೀಂ ಸವಿಯುವುದು. ಆರ್ಟ್ ಅಡ್ಡಾ, ಸ್ನೇಹಿತರ ಸಮ್ಮಿಲನ, ಹರಟೆ ಹೀಗೆ ಹತ್ತಾರು ಖುಷಿಯ ವಿಚಾರಗಳು ಒಂದೇ ಸೂರಿನಡಿಯಲ್ಲಿ.