ಸಿನಿಮಾ ಸುದ್ದಿಕಾಂತಾರ 2 ಮಾಡುವ ಯೋಚನೆ ಸದ್ಯಕ್ಕಿಲ್ಲ ಎಂದ ರಿಷಬ್, ಸೀಕ್ವೆಲ್ ಬಗ್ಗೆ ಅಚ್ಚರಿಯ ಮಾಹಿತಿ ಬಿಚ್ಚಿಟ್ಟ 'ದೈವ ನರ್ತಕ'!
'ಕಾಂತಾರ' ಖ್ಯಾತಿಯ ನಟ-ನಿರ್ದೇಶಕ-ಬರಹಗಾರ ರಿಷಬ್ ಶೆಟ್ಟಿ ಅವರೀಗ ಮಂದಿಯ ನಿದ್ದೆಗೆಡಿಸಿದ ಚಿತ್ರದ ಮುಂದುವರಿದ ಭಾಗಕ್ಕೆ ತಯಾರಿ ನಡೆಸುತ್ತಿದ್ದಾರೆ ಎನ್ನುವ ವಿಚಾರ ಕೇಳಿ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಆದರೆ, ರಿಷಬ್ ಮಾತ್ರ ಈ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಹೀಗಿರುವಾಗ 'ದೈವ ನರ್ತಕ' ಈ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ.