ದೇಶಪಕ್ಷದ ಕಾರ್ಯಕರ್ತರ ಇಚ್ಛೆಗೆ ಬದ್ಧ; ಕೊನೆಯ ಬಾರಿಗೆ ರಾಹುಲ್ ಮನವೊಲಿಸಲು ಪ್ರಯತ್ನಿಸುವೆ: ಅಶೋಕ್ ಗೆಹ್ಲೋಟ್
ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸಬೇಕೆ ಎಂಬ ಬಗ್ಗೆ ಪಕ್ಷದ ಕಾರ್ಯಕರ್ತರ ಇಚ್ಛೆಗೆ ಬದ್ಧರಾಗಿರುತ್ತೇನೆ. ಆದರೆ, ರಾಹುಲ್ ಗಾಂಧಿಯವರನ್ನು ಈ ಹುದ್ದೆಗೆ ಒಪ್ಪಿಸಲು ಕೊನೆಯ ಪ್ರಯತ್ನ ಮಾಡುವುದಾಗಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಭಾನುವಾರ ಹೇಳಿದ್ದಾರೆ.