ಕಸ ನಿರ್ವಹಣೆ

ಟ್ರಾಫಿಕ್ ಸಮಸ್ಯೆಗೆ ಪರಿಹಾರ, ಕಸ ನಿರ್ವಹಣೆ ನನ್ನ ಮೊದಲ ಆದ್ಯತೆ: ಡಿಸಿಎಂ ಡಿಕೆಶಿ
ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ಪರಿಹರಿಸುವುದು, ನಗರ ಆಡಳಿತ ಸುಧಾರಣೆ ಮತ್ತು ಕಸ ನಿರ್ವಹಣೆ ನನ್ನ ಮೊದಲ ಆದ್ಯತೆಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.

40 ವರ್ಷ ಹಳೆಯ ಡಂಪ್ ಯಾರ್ಡ್ ಅನ್ನು ಉದ್ಯಾನವನ್ನಾಗಿ ಮಾಡಲು ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಮುಂದು
ಕಳೆದ ವರ್ಷ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ತನ್ನ ವಿಶಿಷ್ಟ ಮತ್ತು ವೈಜ್ಞಾನಿಕ ಉಪಕ್ರಮಗಳಿಂದ ಜನಮನದಲ್ಲಿ ಉಳಿಯುತ್ತಿದೆ. ಕಸ ಹಾಕುವುದು ಮತ್ತು ಅವೈಜ್ಞಾನಿಕವಾಗಿ ಕಸ ಸುರಿಯುವುದರ ವಿರುದ್ಧದ ಹೋರಾಟದ ಭಾಗವಾಗಿ ಹಳೆಯ ಡಂಪಿಂಗ್ ಯಾರ್ಡ್ ಈಗ ಸಾರ್ವಜನಿಕ ಉದ್ಯಾನವಾಗಿ ಪರಿವರ್ತನೆಯಾಗುತ್ತಿದೆ.

ಜನರ ಜೀವನದೊಂದಿಗೆ ಆಟವಾಡಲು ಸಾಧ್ಯವಿಲ್ಲ: ಜಮ್ಮು ಮತ್ತು ಕಾಶ್ಮೀರದ ಆಡಳಿತಕ್ಕೆ ಸುಪ್ರೀಂ ಕೋರ್ಟ್ ಚಾಟಿ
ಘನತ್ಯಾಜ್ಯವನ್ನು ಅವೈಜ್ಞಾನಿಕವಾಗಿ ಸುರಿಯುವ ಮತ್ತು ವಿಲೇವಾರಿ ಮಾಡುವ ಕುರಿತು ಜಮ್ಮು ಮತ್ತು ಕಾಶ್ಮೀರದ ಸ್ಥಳೀಯ ಆಡಳಿತವನ್ನು ಬುಧವಾರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಈ ಮೂಲಕ ಜನರ ಜೀವನದ ಜೊತೆ ಆಟವಾಡಲು ಸಾಧ್ಯವಿಲ್ಲ ಎಂದು ಹೇಳಿದೆ.

ರೂ.200 ಕಟ್ಟಿ... ಮನೆ ಬಾಗಿಲಿಗೇ ಬಂದು ಕಸ ಸ್ವೀಕರಿಸಲಿದ್ದಾರೆ ಬಿಬಿಎಂಪಿ ಸಿಬ್ಬಂದಿಗಳು!
ನಗರದಲ್ಲಿ ಕಸ ಸಮಸ್ಯೆಯನ್ನು ಉತ್ತಮವಾಗಿ ನಿರ್ವಹಿಸಲು ಮುಂದಾಗಿರುವ ಬಿಬಿಎಂಪಿ ಶೀಘ್ರದಲ್ಲೇ ಜನರ ಮನೆ ಬಾಗಿಲಿಗೇ ಬಂದು ಕಸ ಸ್ವೀಕರಿಸಲು ಚಿಂತನೆ ನಡೆಸುತ್ತಿದೆ.

