ರಾಜ್ಯಡಿಸೆಂಬರ್ ವೇಳೆಗೆ ರಾಜ್ಯದಲ್ಲಿ ಶೇಕಡಾ 90 ರಷ್ಟು ಕೋವಿಡ್ ಲಸಿಕೆ ನೀಡಿಕೆ ಕಷ್ಟಸಾಧ್ಯ
ಅರ್ಹ ಜನಸಂಖ್ಯೆಯ ಶೇಕಡ 90 ರಷ್ಟು ಲಸಿಕೆ ಹಾಕುವ ತನ್ನ ನಿರೀಕ್ಷಿತ ಗುರಿ ತಲುಪಲು ರಾಜ್ಯ ಸರ್ಕಾರಕ್ಕೆ ಇನ್ನೂ ಕೇವಲ ಎರಡು ತಿಂಗಳು ಬಾಕಿಯಿದೆ. ಅಷ್ಟರೊಳಗೆ ಕೋವಿಡ್-19 ಎರಡು ಡೋಸ್ ಗಳೊಂದಿಗೆ ಕೇವಲ ಶೇ.82 ರಷ್ಟು ವಯಸ್ಕರಿಗೆ ಮಾತ್ರ ಲಸಿಕೆ ಹಾಕಬಹುದೆಂದು ಸ್ವತಂತ್ರ ಸಾರ್ವಜನಿಕ ಆರೋಗ್ಯ ನೀತಿ ವಿಶ್ಲೇಷಕ ಡಾ. ಚಂದ್ರಕಾಂತ್ ಲಹರಿಯಾ ಅಭಿಪ್ರಾಯಪಟ್ಟಿದ್ದಾರೆ.