ರಾಜ್ಯಕೆರೆಗಳಿಗೆ ಕಲುಷಿತ ನೀರು ಬಿಡುವ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ: ಬಿಬಿಎಂಪಿ ಎಚ್ಚರಿಕೆ
ಲಾಕ್'ಡೌನ್ ಪರಿಣಾಮ ನಗರದ ಹಲವು ಕೆರೆಗಳಿಗೆ ಸೇರುತ್ತಿದ್ದ ಮಾಲಿನ್ಯದ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡು ಬಂದಿದ್ದು, ಇದೇ ಮಾದರಿಯಲ್ಲಿಯೇ ಕೆರೆಗಳ ಸ್ವಚ್ಛತೆಯನ್ನು ಕಾಪಾಡಬೇಕೆಂದು ಅಧಿಕಾರಿಗಳಿಗೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಅವರು ಸೂಚನೆ ನೀಡಿದ್ದಾರೆ.