ರಾಜ್ಯಬೆಂಗಳೂರಿನ ಎಲ್ಲಾ ವಾರ್ಡ್ ಗಳಲ್ಲಿ ಬಡ ಮಕ್ಕಳಿಗಾಗಿ 'ಬೆಳಕು' ಕಲಿಕಾ ಕೇಂದ್ರಗಳ ಸ್ಥಾಪನೆ
ನಗರದಲ್ಲಿನ ಕೊಳಚೆ ಪ್ರದೇಶದ ಬಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನೆರವಾಗಲು ಬಿಬಿಎಂಪಿ ಕಲ್ಯಾಣ ಇಲಾಖೆ ಎಲ್ಲಾ ವಾರ್ಡ್ ಗಳಲ್ಲಿ ಬೆಳಕು ಕಲಿಕಾ ಕೇಂದ್ರವೊಂದನ್ನು ಸ್ಥಾಪಿಸುತ್ತಿದೆ. ಈ ಕೇಂದ್ರದಲ್ಲಿ ಓರ್ವ ನುರಿತ ಶಿಕ್ಷಕ, ಸುಸಜ್ಜಿತ ಕೊಠಡಿ ಹಾಗೂ ಪುಸ್ತಕಗಳು ಇರಲಿವೆ.