ರಾಜ್ಯರಾಜ್ಯದಲ್ಲಿ ಹೊಸದಾಗಿ 22 ಮಂದಿಗೆ ಕೊರೋನಾ; ಬೆಂಗಳೂರು, ಮಂಗಳೂರಿನಲ್ಲಿ ಇಬ್ಬರು ಸಾವು; ಸೋಂಕಿತರ ಸಂಖ್ಯೆ 981ಕ್ಕೆ ಏರಿಕೆ
ಕೊರೋನಾವೈರಸ್ ಕರ್ನಾಟಕದಲ್ಲಿ ದಿನದಿನಕ್ಕೆ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದ್ದು ಗುರುವಾರ ಮಧ್ಯಾಹ್ನದ ವೇಳೆಗೆ ರಾಜ್ಯದಲ್ಲಿ ಮತ್ತೆ 22 ಮಂದಿಗೆ ಸೋಂಕು ತಗುಲಿದೆ. ಅಲ್ಲದೆ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ತಲಾ ಒಬ್ಬರು ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ.