ರಾಜ್ಯಕರ್ನಾಟಕದಲ್ಲಿ ಸಾವಿರದ ಗಡಿ ದಾಟಿದ ಕೋವಿಡ್ ಸೋಂಕಿತರ ಸಂಖ್ಯೆ: ಬೆಂಗಳೂರಿನಲ್ಲಿ 13 ಸೇರಿದಂತೆ ರಾಜ್ಯದಲ್ಲಿ 45 ಹೊಸ ಪ್ರಕರಣ
ಕರ್ನಾಟಕದ ಕೊರೋನಾವೈರಸ್ ಸೋಂಕಿತರ ಸಂಖ್ಯೆ ಶುಕ್ರವಾರ ಮಧ್ಯಾಹ್ನ ಸಾವಿರದ ಗಡಿ ದಾಟಿದೆ. ಗುರುವಾರ ಸಂಜೆಯಿಂದ ಶುಕ್ರವಾರ ಮಧ್ಯಾಹ್ನದ ನಡುವೆ ರಾಜ್ಯದಲ್ಲಿ ಒಟ್ಟು 45 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ. ಇದರೊಡನೆ ರಾಜ್ಯದ ಒಟ್ಟಾರೆ ಸೋಂಕಿತರ ಸಂಖ್ಯೆ 1032ಕ್ಕೆ ತಲುಪಿದೆ.