ರಾಜ್ಯಹೆಸರಿಗೆ ಐಟಿ ರಾಜಧಾನಿ: ಅಪ್ ಡೇಟ್ ಆಗದ ಕರ್ನಾಟಕ ಸರ್ಕಾರದ ವೆಬ್ ಸೈಟ್ ಗಳು ಅಭಿವೃದ್ಧಿಯಲ್ಲಿ ಹಿಂದೆ!
ರಾಜಧಾನಿ ಬೆಂಗಳೂರು ಐಟಿ ರಾಜಧಾನಿ ಎಂಬ ಹೆಸರು ಪಡೆದಿದ್ದರೂ, ರಾಜ್ಯ ಸರ್ಕಾರದ ಇಲಾಖೆಗಳು ತಮ್ಮ ವೆಬ್ಸೈಟ್ಗಳನ್ನು ನವೀಕರಿಸಲು ಮತ್ತು ಬದಲಾವಣೆಗಳಿಗೆ ತಕ್ಕಂತೆ ಹೆಜ್ಜೆ ಹಾಕುವಲ್ಲಿ ವಿಫಲವಾಗಿದೆ. ಬಹುತೇಕ ಇಲಾಖೆಗಳ ಅಧಿಕೃತ ವೆಬ್ಸೈಟ್ಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಬಂಧಪಟ್ಟ ಸಚಿವರ ಭಾವಚಿತ್ರವನ್ನು ಮಾತ್ರ ಬದಲಾಯಿಸಿವೆ.