ಕರ್ನಾಟಕ ಲಾಕ್ ಡೌನ್

ಸಂಕಷ್ಟ ಎದುರಿಸುತ್ತಿರುವ ಹೊಟೇಲ್, ರೆಸಾರ್ಟ್ ಗಳ ವಿದ್ಯುತ್ ಬಿಲ್ ಗೆ ವಿನಾಯ್ತಿ ಕೊಡಿ: ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯ
ಕೋವಿಡ್-19ನಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ಆತಿಥ್ಯ ವಲಯಗಳಾದ ಹೊಟೇಲ್, ರೆಸಾರ್ಟ್ಸ್ ಮತ್ತು ಲಾಡ್ಜ್ ಗಳ ವಿದ್ಯುತ್ ಶುಲ್ಕ ಪಾವತಿಗೆ ವಿನಾಯ್ತಿ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕರ್ನಾಟಕ ಲಾಕ್‌ಡೌನ್ ಸಂಕಷ್ಟ: ಮಗನ ಔಷಧಿಗಾಗಿ 300 ಕಿ.ಮೀ. ಸೈಕಲ್ ತುಳಿದ ತಂದೆ!
ತನ್ನ ಮಗ 18 ವರ್ಷದವನಾಗುವವರೆಗೂ ಪ್ರತಿದಿನ ತಪ್ಪಿಸದಂತೆ ಔಷಧಿ ತೆಗೆದುಕೊಂಡರೆ ಅವನು ಇತರ ಹುಡುಗರಂತೆ ಸಾಮಾನ್ಯನಂತಾಗುತ್ತಾನೆ ಎಂದು ವೈದ್ಯರು ನೀಡಿದ ಭರವಸೆಯಿಂದಾಗಿ ಎರಡನೇ ಆಲೋಚನೆ ಮಾಡದೆ ತಂದೆ ಬರೋಬ್ಬರಿ 300 ಕಿ.ಮೀ ಸೈಕಲ್ ತಿಳಿದು ಔಷಧಿ ಖರೀದಿಸಿದ್ದಾರೆ.

ಬಿಗ್ ಬಾಸ್'ಗೂ ತಟ್ಟಿದ ಕೊರೋನಾ ಲಾಕ್ ಡೌನ್: ನಾಳೆಯಿಂದ ರಿಯಾಲಿಟಿ ಶೋ ಸ್ಧಗಿತ
ದೇಶದಲ್ಲಿ ಕೊರೋನಾ ಎರಡನೇ ಅಲೆ ಮಿತಿ ಮೀರಿ ಹರಡುತ್ತಿರುವುದರಿಂದ ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರಗಳೇ ಲಾಕ್ ಡೌನ್ ಘೋಷಣೆ ಮಾಡುತ್ತಿವೆ. ಅಂತೆ ಕರ್ನಾಟಕದಲ್ಲೂ ಮೇ 10ರಿಂದ 14 ದಿನಗಳ ಕಾಲ ಲಾಕ್ ಡೌನ್ ಘೋಷಿಸಲಾಗಿದೆ.

ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ಪ್ರೋತ್ಸಾಹ ಧನ ವಿತರಣೆ: ಸಚಿವ ಎಸ್.ಟಿ. ಸೋಮಶೇಖರ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1271 ಮಂದಿ ಆಶಾ ಕಾರ್ಯಕರ್ತೆಯರಿದ್ದಾರೆ. ಅವರಿಗೆ ಸಹಕಾರ ಇಲಾಖೆಯಿಂದ ತಲಾ 3 ಸಾವಿರ ಪ್ರೋತ್ಸಾಹಧನವನ್ನು ನೀಡುವ ನಿಟ್ಟಿನಲ್ಲಿ ಖುದ್ದು ನಾನೇ ಜಿಲ್ಲೆಗೆ ಬಂದಿದ್ದೇನೆ ಎಂದು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಂಡು ಪಾಳಿಗಳಲ್ಲಿ ತರಗತಿ ನಡೆಸಲು ಕ್ರಮ: ಶಿಕ್ಷಣ ಇಲಾಖೆ
ಕೊರೋನಾ ಸೋಂಕು ಸುದೀರ್ಘ ಕಾಲ ಉಳಿಯುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡೇ ಶಾಲೆಗಳನ್ನು ನಡೆಸುವ ಅನಿವಾರ್ಯತೆಗೆ ಸಿಲುಕಿರುವ ಶಿಕ್ಷಣ ಇಲಾಖೆ ಎರಡು ಪಾಳಿಗಳಲ್ಲಿ ತರಗತಿಗಳನ್ನು ನಡೆಸಲು ಮುಂದಾಗಿದೆ.

ಸೋಂಕಿನ ಲಕ್ಷಣವಿಲ್ಲದ ಅನ್ಯ ಜಿಲ್ಲೆಗಳಿಂದ ಆಗಮಿಸಿದ ವ್ಯಕ್ತಿಗಳಿಗೆ ಕ್ವಾರಂಟೈನ್ ಇಲ್ಲ: ಆರೋಗ್ಯ ಇಲಾಖೆ ಪುನರುಚ್ಚಾರ
ಅನ್ಯ ಜಿಲ್ಲೆಯಿಂದ ಇನ್ನೊಂದು ಜಿಲ್ಲೆ ಆಗಮಿಸುವ ವ್ಯಕ್ತಿಗಳಲ್ಲಿ ಕೊರೋನಾ ಸೋಂಕಿನ ಲಕ್ಷಣಗಳಿಲ್ಲದಿದ್ದಲ್ಲಿ ಅವರಿಗೆ ಕ್ವಾರಂಟೈನ್ ಮಾಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವಾಲಯ ಪುನರುಚ್ಚರಿಸಿದೆ.

ಸದ್ಯಕ್ಕೆ ಕೊರೋನಾ ನಿರ್ಮೂಲನೆ ಅಸಾಧ್ಯ; ಅದರೊಂದಿಗೆ ಬದುಕುವುದನ್ನು ಕಲಿಯಬೇಕು: ಡಾ. ಕೆ.ಸುಧಾಕರ್
ಕಳೆದ ಕೆಲ ದಿನಗಳಿಂದ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಸೋಂಕು ಸುಲಭದಲ್ಲಿ ನಿರ್ಮೂಲನೆ ಆಗಲಾರದು ಎಂದು ನಿನ್ನೆ ವಿಶ್ವಸಂಸ್ಥೆ ಸಹ ಖಚಿತ ಪಡಿಸಿದೆ. ಹೀಗಾಗಿ ನಾವು ಇದರ ಜೊತೆಗೆ ಬದುಕುವುದನ್ನು ಕಲಿಯಬೇಕು ಸಚಿವ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ. ಸುಧಾಕರ್ ಹೇಳಿದ್ದಾರೆ.

ವಲಸೆ ಕಾರ್ಮಿಕರ ವಿಚಾರದಲ್ಲಿ ಮಾನವೀಯತೆಯಿಂದ ವರ್ತಿಸಿ: ಖಂಡ್ರೆ
ಜನ ಸತ್ತ ಮೇಲೆ ಪರಿಹಾರ ಕೊಡುವುದು ಸಾಧನೆಯಲ್ಲ, ಇರುವಾಗಲೇ ಬದುಕು ಕಲ್ಪಿಸುವುದು ಸರ್ಕಾರದ ಕರ್ತವ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಪ್ರಯಾಣಿಕರಿಂದ ಹೆಚ್ಚುವರಿಯಾಗಿ ಹಣ ಪಡೆದರೆ ದಂಡ: ಸಾರಿಗೆ ಆಯುಕ್ತರ ಎಚ್ಚರಿಕೆ
ಕೊರೋನಾ ವೈರಸ್ ಲಾಕ್ ಡೌನ್ ಬೆನ್ನಲ್ಲೇ ಸಾರಿಗೆ ಸಂಸ್ಥೆಗಳು ಪ್ರಯಾಣಿಕರಿಂದ ಹೆಚ್ಚುವರಿ ಹಣ ಪಡೆದರೆ ದಂಡ ಹಾಕಲಾಗುತ್ತದೆ ಎಂದು ಸಾರಿಗೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

