ರಾಜ್ಯಕಳಪೆ ಬೀಜ ಪೂರೈಕೆಯಿಂದ ಉದ್ದು ಬೆಳೆ ನಷ್ಟ: ದಶಕದ ನಂತರ ಕಲಬುರಗಿ ರೈತರಿಗೆ ಎಕರೆಗೆ 5 ಸಾವಿರ ರೂ. ಪರಿಹಾರ
ಸರ್ಕಾರಗಳ ಸತತ ನಿರ್ಲಕ್ಷ್ಯದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುದಕ್ಕೆ ಕಲಬುರಗಿ ಜಿಲ್ಲೆಯ ರೈತರೇ ಸಾಕ್ಷಿಯಾಗಿದ್ದಾರೆ. ಕಲಬುರಗಿ ಜಿಲ್ಲೆಯ ರೈತರು ಕರ್ನಾಟಕ ರಾಜ್ಯ ಬೀಜ ನಿಗಮ (ಕೆಎಸ್ಸಿಎಲ್) ಮೂಲಕ ಕೃಷಿ ಇಲಾಖೆಯು ಕಳಪೆ ಬೀಜಗಳನ್ನು ಪೂಕೈಕೆ ಮಾಡಿದ್ದರಿಂದ ಉಂಟಾದ ಉದ್ದು ಬೆಳೆ ನಷ್ಟಕ್ಕೆ ಪರಿಹಾರವನ್ನು ಪಡೆಯಲು ದಶಕಕ್ಕೂ ಹೆಚ್ಚು ಕಾಲ ಕಾಯ್ದಿದ್ದಾರೆ.