ರಾಜಕೀಯಖಾತೆ ಹಂಚಿಕೆ ನಂತರ ಇದೀಗ ಜಿಲ್ಲಾ ಉಸ್ತುವಾರಿಗಾಗಿ ಲಾಬಿ, ಸಿಎಂ ಯಡಿಯೂರಪ್ಪಗೆ ನೂತನ ಸಚಿವರ ಮೊರೆ
ಬಿ ಎಸ್ ಯಡಿಯೂರಪ್ಪ ಅವರ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಯಾಗಿರುವವರು ತಮ್ಮ ಸಚಿವಾಲಯಗಳ ಉಸ್ತುವಾರಿಯನ್ನು ಕೆಲವೇ ವಾರಗಳ ಹಿಂದೆ ವಹಿಸಿಕೊಂಡಿದ್ದಾರೆ, ಆದರೆ ಈಗಾಗಲೇ ಜಿಲ್ಲಾ ಉಸ್ತುವಾರಿ ಜವಾಬ್ದಾರಿಗಳಿಗಾಗಿ ತೀವ್ರವಾದ ಲಾಬಿ ಮಾಡಲು ಪ್ರಾರಂಭಿಸಿದ್ದಾರೆ. ಹೆಚ್ಚಾಗಿ ತವರು ಜಿಲ್ಲೆ ಅಥವಾ ಹೆಚ್ಚು ಆದಾಯ ಗಳಿಸಬಹುದಾದ ಜಿಲ್ಲೆಗಳಿಗೆ ಬಹು ಬೇಡಿಕೆ ಇದೆ.