ರಾಜ್ಯಕಾಡುಗೋಡಿ ಕಾಡ್ಗಿಚ್ಚು: 'ಮೀಸಲು ಅರಣ್ಯದಲ್ಲಿ ಅಲ್ಲ.. ಖಾಸಗಿ ಜಾಗದಲ್ಲಿ ಬೆಂಕಿ ಅವಘಡ'; ಅಗ್ನಿಶಾಮಕ ದಳ ಸ್ಪಷ್ಟನೆ
ಬೆಂಗಳೂರಿನ ವೈಟ್ಫೀಲ್ಡ್ ಬಳಿ ಇರುವ ಕಾಡುಗೋಡಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿ ದುರಂತ ಸಂಭವಿಸಿ ಭಾರಿ ಪ್ರಮಾಣದಲ್ಲಿ ಹರಡಿದೆ ಎಂಬ ಸುದ್ದಿಯನ್ನು ತಳ್ಳಿ ಹಾಕಿರುವ ಕರ್ನಾಟಕ ಅಗ್ನಿಶಾಮಕ ದಳ ಮೀಸಲು ಅರಣ್ಯದಲ್ಲಿ ಅಲ್ಲ.. ಖಾಸಗಿ ಜಾಗದಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ಸ್ಪಷ್ಟನೆ ನೀಡಿದೆ.