ಸಿನಿಮಾ ಸುದ್ದಿವಿನಯ್ ರಾಜ್ಕುಮಾರ್ ಅಭಿನಯದ ಬಾಕ್ಸಿಂಗ್ ಸಿನಿಮಾ ಟೈಟಲ್ '10'?
'ಕಿರಿಕ್ ಪಾರ್ಟಿ' ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರದಲ್ಲಿ ವಿನಯ್ ರಾಜ್ಕುಮಾರ್ ಕಾಣಿಸಿಕೊಳ್ಳುತ್ತಿರುವುದು ಹಳೆಯ ಸುದ್ದಿ. ಇದೀಗ ಆ ಚಿತ್ರದ ಮುಹೂರ್ತ ಕೂಡ ನೆರವೇರಿದೆ. ಕರಮ್ ಚಾವ್ಲಾ ನಿರ್ದೇಶಿಸಲಿರುವ ಈ ಸಿನಿಮಾದಲ್ಲಿ ಅಣ್ಣಾವ್ರ ಮೊಮ್ಮಗ ಬಾಕ್ಸರ್ ಪಾತ್ರದಲ್ಲಿ ರಿಂಗ್ಗೆ ಎಂಟ್ರಿ ಕೊಡಲಿದ್ದಾರೆ.