ದೇಶಪತ್ರಿಯನ್ನು ಸಾಯಿಬಾಬಾ ಜನ್ಮಸ್ಥಾನವೆಂದು ಕರೆಯದಿರಲು ಸಿಎಂ ಒಪ್ಪಿಗೆ, ವಿವಾದ ಕೊನೆಯಾಗಿದೆ ಎಂದ ಸೇನಾ ಮುಖಂಡ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪತ್ರಿ ಗ್ರಾಮವನ್ನು ಗುರು, ಮಹಾ ಸಂತ ಶ್ರೀ ಸಾಯಿಬಾಬಾ ಅವರ ಜನ್ಮಸ್ಥಳ ಎಂದು ಕರೆಯುವುದಿಲ್ಲಎಂದು ಭರವಸೆ ನೀಡಿದ್ದಾರೆಂದು ಶಿವಸೇನೆ ಮುಖಂಡ ಕಮಲಾಕರ್ ಕೋಥೆ ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಂತೆಯೇ ಈ ವಿಷಯವು ಇಲ್ಲಿಗೇ ಮುಕ್ತಾಯವಾಗಿದ್ದು ಯಾವುದೇ ಹೊಸ ವಿವಾದ ಸೃಷ್ಟಿಯಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ