ದೇಶವೈದ್ಯರ ಮುಷ್ಕರಕ್ಕೆ ಏಮ್ಸ್, ಇತರೆ ಆಸ್ಪತ್ರೆಗಳಿಂದ ಬೆಂಬಲ, ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ
ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ಮಾಡಲು ಅನುಮತಿ ನೀಡಿರುವ ಕೇಂದ್ರ ಸರ್ಕಾರದ ವಿರುದ್ಧ ಶುಕ್ರವಾರ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿರುವ ಮುಷ್ಕರಕ್ಕೆ ದೆಹಲಿ ಪ್ರತಿಷ್ಠಿತ ಏಮ್ಸ್ ಹಾಗೂ ಇತರೆ ಆಸ್ಪತ್ರೆಗಳು ಸಹ ಬೆಂಬಲ ನೀಡಿದ್ದು, ವೈದ್ಯರು ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಿಸುವ ಮೂಲಕ ಪ್ರತಿಭಟಿಸಿದರು.