ಕನ್ನಡ ಚಲನಚಿತ್ರೋದ್ಯಮ

Year 2025: ಬಿಡುಗಡೆ ಕಾಣಲಿರುವ ಬಹು ನಿರೀಕ್ಷಿತ ಕನ್ನಡ ಚಿತ್ರಗಳು

ಪ್ರಾದೇಶಿಕ vs ಪ್ಯಾನ್-ಇಂಡಿಯಾ; 2025ರಲ್ಲಿ ಬಾಕ್ಸಾಫೀಸ್ ರೇಸ್ ನಲ್ಲಿ ಕನ್ನಡ ಸಿನಿಮಾಗಳು!
ಇದೀಗ ಹೊಸ ವರ್ಷ 2025ರಲ್ಲೂ ಕನ್ನಡ ಸಿನಿಮಾ ಒಂದು ಮಹತ್ವದ ಮುನ್ನಡೆಯನ್ನು ಸಾಧಿಸುವ ನಿರೀಕ್ಷೆಯಿದೆ. ಹಲವಾರು ಚಲನಚಿತ್ರಗಳು ಬಹು ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ಬಿಡುಗಡೆಗಳ ಮೂಲಕ ವ್ಯಾಪಕ ಪ್ರೇಕ್ಷಕರನ್ನು ತಲುಪಲು ಸಜ್ಜಾಗಿವೆ.

Video: ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲು; Bisleri ನೀರಿನ ಬಾಟಲ್ ಮೇಲೆ Bhairathi Ranagal ಪ್ರಚಾರ
ನೀರಿನ ಬಾಟಲಿ ಮೇಲೆ ಹಾಕುವ ಸ್ಟಿಕರ್ ಮೇಲೆ ಭೈರತಿ ರಣಗಲ್ ಚಿತ್ರದ ಪುಟ್ಟ ಪೋಸ್ಟರ್ ಮುದ್ರಣವಾಗುತ್ತಿರುವ ಮತ್ತು ನೀರಿನ ಬಾಟಲಿ ಮೇಲೆ ಪೋಸ್ಟರ್ ಸಹಿತ ಸ್ಟಿಕ್ಕರ್ ಇರುವ ನೀರಿನ ಬಾಟಲಿಗಳು ಹೊರಬರುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಕನ್ನಡ ಚಿತ್ರರಂಗದ ಒಳಿತು, ಸಂಕಷ್ಟ ನಿವಾರಣೆಗೆ ಸಂಕಲ್ಪ: ಕಲಾವಿದರ ಸಂಘದಲ್ಲಿ ವಿಶೇಷ ಹೋಮ-ಹವನ
ಬೆಳಗ್ಗೆ 8 ಗಂಟೆಯಿಂದ ಪೂಜೆ ಆರಂಭವಾಗಿದ್ದು, ಗಣಪತಿ ಹೋಮ , ಮೃತ್ಯುಂಜಯ ಹೋಮ ಬಳಿಕ ಸರ್ಪ ಶಾಂತಿ ಹೋಮ ನಡೆಯಲಿದೆ. ಪೂಜೆ ಬಳಿಕ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಹೋಮ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಎಲ್ಲಾ ಕಲಾವಿದರಿಗೂ ಆಹ್ವಾನ ನೀಡಲಾಗಿದೆ.

Cauvery theater: ಇತಿಹಾಸದ ಪುಟ ಸೇರಿದ ಬೆಂಗಳೂರಿನ ಕಾವೇರಿ ಚಿತ್ರ ಮಂದಿರ, 2 ವರ್ಷದಲ್ಲಿ 6 ಥಿಯೇಟರ್ ಬಂದ್!

Cauvery theater: ಇತಿಹಾಸದ ಪುಟ ಸೇರಿದ ಬೆಂಗಳೂರಿನ ಕಾವೇರಿ ಚಿತ್ರ ಮಂದಿರ; 2 ವರ್ಷದಲ್ಲಿ 6 ಥಿಯೇಟರ್ ಬಂದ್!
ಬೆಂಗಳೂರಿನ ಮತ್ತೊಂದು ಸಿಂಗಲ್ ಸ್ಕ್ರೀನ್ ಥಿಯೇಟರ್ ಬಾಗಿಲು ಹಾಕಿದ್ದು, ಬೆಂಗಳೂರಿನ ಅತಿದೊಡ್ಡ ಚಿತ್ರಮಂದಿರಗಳಲ್ಲಿ ಒಂದಾಗಿದ್ದ ಸ್ಯಾಂಕಿ ರಸ್ತೆಯ ʻಕಾವೇರಿʼ ಚಿತ್ರಮಂದಿರ ಈಗ ಶಾಶ್ವತವಾಗಿ ಮುಚ್ಚಿದೆ ಎಂದು ಹೇಳಲಾಗಿದೆ.

ಖ್ಯಾತ ನಟ, ನಿರ್ದೇಶಕ ಸಿವಿ ಶಿವಶಂಕರ್ ಹೃದಯಾಘಾತದಿಂದ ನಿಧನ
ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಸಾಹಿತಿಯೂ ಆಗಿದ್ದ ಸಿ.ವಿ. ಶಿವಶಂಕರ್ ಅವರು ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಚಿರಂಜೀವಿ ಸರ್ಜಾ ಹುಟ್ಟುಹಬ್ಬದಂದು ಹೊಸ ಚಿತ್ರ; ಪ್ರಧಾನ ಪಾತ್ರದಲ್ಲಿ ಮೇಘನಾ ರಾಜ್
ಅಕಾಲದಲ್ಲಿ ಎಲ್ಲರನ್ನೂ ಅಗಲಿದ ನಟ ಚಿರಂಜೀವಿ ಸರ್ಜಾ ಹುಟ್ಟುಹುಬ್ಬದಂದು ನೂತನ ಚಿತ್ರ ಆರಂಭಗೊಳ್ಳಲಿದೆ.

ಪೈರಸಿ ಹಾವಳಿಗೆ ಚಿತ್ರರಂಗ ತತ್ತರ; ತೆರೆಕಂಡ ಮೂರೇ ದಿನಕ್ಕೆ ಸಂಪೂರ್ಣ ಚಿತ್ರ ಲೀಕ್, ದೂರು ದಾಖಲು
ಪೈರಸಿ ಹಾವಳಿಗೆ ಕನ್ನಡ ಚಿತ್ರರಂಗ ತತ್ತರಿಸಿದೆ. ಸಿನಿಮಾ ರಿಲೀಸ್ ಆಗೋ ಮೂರೇ ದಿನಕ್ಕೆ ಸಿನಿಮಾವೊಂದು ಪೈರಸಿಯಾಗಿರೋದು ಸ್ಯಾಂಡಲ್ ವುಡ್ ಅನ್ನು ದಂಗುಬಡಿಸಿದೆ.

