ಕನ್ನಡ ಕಾರ್ಯಕರ್ತರು

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟದ ಕೂಗಿಗೆ ವಿರೋಧ: ‘ಮನುವಾದಿಗಳಿಂದ ಹೈಜಾಕ್' ಕನ್ನಡ ಪರ ಹೋರಾಟಗಾರರ ಆಕ್ರೋಶ
ಇದು ಅನೇಕ ಕನ್ನಡ ಕಾರ್ಯಕರ್ತರು, ಪ್ರಗತಿಪರ ಸಂಘಟನೆಗಳು ಮತ್ತು ಇತರರನ್ನು ಕೆರಳಿಸಿದೆ, ಅವರು ತಮ್ಮ ಆಹಾರ ಪದ್ಧತಿ ಅಥವಾ ಆಯ್ಕೆಗಳನ್ನು ಪ್ರಶ್ನಿಸುವ ಹಕ್ಕು ಸಂಘಟಕರಿಗೆ ಇಲ್ಲ ಎಂದು ಪ್ರತಿಪಾದಿಸಿದ್ದಾರೆ.

ರಾಜ್ಯ ಸರ್ಕಾರ ನಿಯಮಗಳನ್ನು ಜಾರಿಗೊಳಿಸಲು ವಿಫಲವಾದಾಗ ಹೋರಾಟ ಅನಿವಾರ್ಯ: ಬಸವರಾಜ ಬೊಮ್ಮಾಯಿ
ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರವು ನಿಯಮಗಳನ್ನು ಸಮರ್ಪಕವಾಗಿ ಜಾರಿ ಮಾಡದಿದ್ದರಿಂದ ಕನ್ನಡ ಪರ ಸಂಘಟನೆಗಳು ಹೋರಾಟದ ಹಾದಿ ಹಿಡಿಯಬೇಕಾಗಿದೆ’ ಎಂದು ಬಿಜೆಪಿ ಹಿರಿಯ ಮುಖಂಡ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಬ್ಬರು ಕಾರ್ಯಕರ್ತರ ವಿರುದ್ಧ ರೌಡಿಶೀಟರ್ ಪ್ರಕರಣ ದಾಖಲು: ಆಕ್ರೋಶಗೊಂಡ ಕನ್ನಡ ಪರ ಸಂಘಟನೆಗಳು
ವಿಧಾನಸಭಾ ಚುನಾವಣೆಗೂ ಮುನ್ನ ಕನ್ನಡ ಕಾರ್ಯಕರ್ತರ ಮೇಲೆ ರೌಡಿಶೀಟರ್ ಪ್ರಕರಣ ದಾಖಲಿಸಿರುವ ಪೊಲೀಸ್ ಇಲಾಖೆ ವಿರುದ್ಧ ಕನ್ನಡ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಡಿ ವಿವಾದ: ಮಹಾರಾಷ್ಟ್ರ ಸಚಿವರುಗಳ ಭೇಟಿ ವಿರೋಧಿಸಿ ಬೆಳಗಾವಿಯಲ್ಲಿ ಕನ್ನಡ ಸಂಘಟನೆಗಳ ಪ್ರತಿಭಟನೆ
ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ, ಶಂಭುರಾಜ್ ದೇಸಾಯಿ ಹಾಗೂ ಮಹಾರಾಷ್ಟ್ರ ಗಡಿ ಸಲಹಾ ಸಮಿತಿ ಅಧ್ಯಕ್ಷ ಧೈರ್ಯಶೀಲ ಮಾನೆ ಅವರು ಡಿಸೆಂಬರ್ 6ರಂದು ಬೆಳಗಾವಿಗೆ ಆಗಮಿಸುವುದಾಗಿ ಹೇಳಿದ್ದು, ಮಹಾರಾಷ್ಟ್ರದ ಸಚಿವರ ಆಗಮನಕ್ಕೆ ಕನ್ನಡಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.

ಬೆಳಗಾವಿಯಲ್ಲಿ ರಾಯಣ್ಣ ಪ್ರತಿಮೆ ಪುನರ್ ಸ್ಥಾಪನೆ, ಕರವೇ ಕಾರ್ಯಕರ್ತರಿಂದ ಪ್ರತಿಭಟನೆ, ಪೊಲೀಸರ ಲಾಠಿಚಾರ್ಜ್
ಬೆಳಗಾವಿಯಲ್ಲಿ ಪರಿಸ್ಥಿತಿ ಕ್ಷಣದಿಂದ ಕ್ಷಣಕ್ಕೆ ಉದ್ವಿಗ್ನವಾಗುತ್ತಿದೆ. ಪುಂಡರು ನಿನ್ನೆ ನಸುಕಿನ ಜಾವ ಧ್ವಂಸಗೊಳಿಸಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಸರಿಪಡಿಸಿ ಸ್ಥಳೀಯರು ಇಂದು ಭಾನುವಾರ ಪುನರ್ ಪ್ರತಿಷ್ಠಾಪಿಸಿದ್ದಾರೆ.

ಸಂಸದ ಡಿವಿಎಸ್, ತೇಜಸ್ವಿ ಸೂರ್ಯರಿಂದ ಕನ್ನಡಕ್ಕೆ ಅವಮಾನ: ವಾಟಾಳ್ ನಾಗರಾಜ್ ಆಕ್ರೋಶ
ರಾಜ್ಯದಲ್ಲಿ ಕನ್ನಡ ಭಾಷೆ ಹಾಗೂ ಕನ್ನಡಿಗರೇ ಸಾರ್ವ ಭೌಮರು ಎಂದು ಹೋರಾಟ ಮಾಡುವವರನ್ನು ರೌಡಿಗಳು ಮತ್ತು ಕಿಡಿಗೇಡಿಗಳೆಂದು ಹೇಳಿ ಸಂಸದ ಸದಾನಂದ ಗೌಡ ಹಾಗೂ ತೇಜಸ್ವಿ ಸೂರ್ಯ ಇಬ್ಬರೂ ಕನ್ನಡ ಭಾಷೆಗೆ ಅವಮಾನ ಮಾಡಿದ್ದಾರೆ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ

ಬೆಂಗಳೂರು: ಹಿಂದಿ ಬ್ಯಾನರ್ ಹರಿದ 6 ಕನ್ನಡ ಕಾರ್ಯಕರ್ತರ ಬಂಧನ
ಬೆಂಗಳೂರಿನ ಇನ್ ಫ್ಯಾಂಟ್ರಿ ರಸ್ತೆಯ ಪ್ರಾರ್ಥನಾ ಮಂದಿರದ ಹೊರಗೆ ಜೈನ ಸಮುದಾಯದ ಕೆಲವು ಸದಸ್ಯರು ಹಾಕಿದ ಹಿಂದಿ ಬೋರ್ಡ್ ನ್ನು ಕೆಲ ಕನ್ನಡ ಪರ ಕಾರ್ಯಕರ್ತರು ತೆಗೆದುಹಾಕಿದ ಘಟನೆಯೊಂದು ರಾಜ್ಯದಲ್ಲಿ ಮತ್ತೊಂದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಅವಹೇಳನಕಾರಿ ಫೇಸ್ ಬುಕ್ ಪೋಸ್ಟ್: ಎಂಇಎಸ್ ಕಾರ್ಯಕರ್ತನ ವಿರುದ್ಧ ಕ್ರಮಕ್ಕೆ ಸಂಘಟನೆಗಳ ಒತ್ತಾಯ
ಮಹಾರಾಷ್ಟ್ರ ಏಕೀಕರಣ ಸಮಿತಿಯ ಕಾರ್ಯಕರ್ತ ಸೂರಜ್ ಕನಬರ್ಕರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ...

