ರಾಜ್ಯಅಪ್ರಾಪ್ತ ಬಾಲಕನಿಗೆ ಚಾಕು ತೋರಿಸಿ ದರೋಡೆ ಮಾಡಿದ್ದ ವ್ಯಕ್ತಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ ನ್ಯಾಯಲಯ
ಬೆಂಗಳೂರು ನಗರದ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚಾಕು ತೋರಿಸಿ ಅಪ್ರಾಪ್ತ ಬಾಲಕನ ಸೆಲ್ ಫೋನ್ ಅನ್ನು ದೋಚಿದ್ದಕ್ಕಾಗಿ 29 ವರ್ಷದ ಯುವಕನಿಗೆ ವಿಶೇಷ ನ್ಯಾಯಾಲಯವು ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.