ದೇಶಮಣಿಪುರ: ಪೊಲೀಸ್ ಔಟ್ ಫೋಸ್ಟ್ ಗಳಿಂದ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ಲೂಟಿ, ಓರ್ವ ಪೋಲೀಸ್ ಹತ್ಯೆ
ಮಣಿಪುರದ ಬಿಷ್ಣುಪುರ್ ಜಿಲ್ಲೆಯ ಎರಡು ಪೊಲೀಸ್ ಭದ್ರತಾ ಪೋಸ್ಟ್ಗಳನ್ನು ಧ್ವಂಸಗೊಳಿಸಿರುವ ಉದ್ರಿಕ್ತ ಗುಂಪುಗಳು, ಬೃಹತ್ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೌತ್ರುಕ್ನಲ್ಲಿ ಸಶಸ್ತ್ರ ದಾಳಿಕೋರರು ಮತ್ತು ಭದ್ರತಾ ಪಡೆಗಳೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ.