ರಾಜ್ಯಕರ್ನಾಟಕ ಸರ್ವ ಸಮುದಾಯದ ಶಾಂತಿಯ ಓಯಸಿಸ್: ರಾಜ್ಯ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ
ಕರ್ನಾಟಕ ಶಾಂತಿ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ನಾಡು ಎಂದು ಪ್ರತಿಪಾದಿಸಿದ ಕರ್ನಾಟಕ ಹೈಕೋರ್ಟ್ನ ನೂತನ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರು ನಾಡಗೀತೆಯನ್ನು ಉಲ್ಲೇಖಿಸಿ, ವಿವಿಧ ಧರ್ಮಗಳನ್ನು ಅನುಸರಿಸುವ ಜನರು ಒಟ್ಟಿಗೆ ವಾಸಿಸುವ ಎಲ್ಲಾ ಸಮುದಾಯಗಳಿಗೆ ಈ ಭೂಮಿ ಶಾಂತಿಯ ಓಯಸಿಸ್ ಎಂದಿದ್ದಾರೆ.