ಒತ್ತುವರಿ ತೆರವು

KR Marketನಲ್ಲಿ JCB ಗರ್ಜನೆ: ಫ್ಲೈಓವರ್ ಕೆಳಗೆ GBA ಒತ್ತುವರಿ ತೆರವು ಕಾರ್ಯಾಚರಣೆ, ಕಣ್ಣೀರಿಟ್ಟ ಬೀದಿ ಬದಿ ವ್ಯಾಪಾರಿಗಳು..!
ಕೆಲವು ವಾರಗಳ ಹಿಂದೆ ಜಿಬಿಎ ಅಧಿಕಾರಿಗಳು ಅತಿಕ್ರಮಣ ತೆರವುಗೊಳಿಸಿ, ಪಾದಚಾರಿ ಮಾರ್ಗ ಹಾಗೂ ಮುಖ್ಯರಸ್ತೆಯಲ್ಲಿ ಯಾವುದೇ ರೀತಿಯ ವ್ಯಾಪಾರ ನಡೆಸದಂತೆ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ್ದರು.

ಕುದುರೆಮುಖ: ಒಂದೇ ವರ್ಷದಲ್ಲಿ 30 ಎಕರೆ ಅರಣ್ಯ ಭೂಮಿ ವಶಕ್ಕೆ; ಅತಿಕ್ರಮಣ ಜಾಗದಲ್ಲಿದ್ದ ಅಡಿಕೆ-ಕಾಫಿ ಗಿಡ ತೆರವು!
2001 ರಿಂದ ವಿವಿಧ ಸಮಯಗಳಲ್ಲಿ ಈ ಅತಿಕ್ರಮಣಗಳನ್ನು ಗುರುತಿಸಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) 2015 ರಲ್ಲಿ ಭೂಮಿಯನ್ನು ಮರುಪಡೆಯಲು ಆದೇಶಿಸಿದರು.
ದಾವಣಗೆರೆ: ಉಪ ಲೋಕಾಯುಕ್ತ ಕ್ರಮ; ಜಗಳೂರು ಕೆರೆಯ 229 ಒತ್ತುವರಿ ತೆರವು!
ಆರೋಗ್ಯಕರ ವಾತಾವರಣದಲ್ಲಿ ವಾಸಿಸುವ ಹಕ್ಕನ್ನು ಜನರು ಹೊಂದಿದ್ದಾರೆ ಮತ್ತು ಕೆರೆಗಳು ಮತ್ತು ಜಲಮೂಲಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಪಂಚಾಯತ್ ಅಧಿಕಾರಿಗಳು ಹೊಂದಿದ್ದಾರೆ ಎನ್ನುವ ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಉಲ್ಲೇಖಿಸಿದರು.

ಕಾಡುಗೋಡಿ ಒತ್ತುವರಿ ತೆರವು: ದಲಿತರನ್ನಷ್ಟೇ ಹೊರಹಾಕಿದ್ದಾರೆ; ಛಲವಾದಿ ನಾರಾಯಣಸ್ವಾಮಿ ಆರೋಪ
ಸ್ವಾತಂತ್ರ್ಯ ಪೂರ್ವದಲ್ಲಿ (1901) ಕಾಡುಗೋಡಿಯ 711 ಎಕರೆಯನ್ನು ಮೀಸಲು ಅರಣ್ಯ ಪ್ರದೇಶ ಎಂದು ಘೋಷಿಸಲಾಗಿತ್ತು. 6-7 ದಶಕಗಳ ಹಿಂದೆಯೇ ಇಲ್ಲಿ ಹಲವರಿಗೆ ಜಮೀನು ಮಂಜೂರು ಮಾಡಲಾಗಿತ್ತು.

ಎಚ್.ಡಿ ಕುಮಾರಸ್ವಾಮಿ ಭೂಮಿ ಒತ್ತುವರಿ ತೆರವು: ಅಧಿಕಾರಿಗಳು ನ್ಯಾಯಾಲಯದ ಆದೇಶ ಪಾಲಿಸಿದ್ದಾರೆ- ಡಿ.ಕೆ ಶಿವಕುಮಾರ್
ಕುಮಾರಸ್ವಾಮಿ ಮತ್ತು ಇತರರು ಅತಿಕ್ರಮಣ ಮಾಡಿದ್ದಾರೆ ಎನ್ನಲಾದ ಸರ್ಕಾರಿ ಭೂಮಿಯನ್ನು ಗುರುತಿಸಲು ರಾಮನಗರ ಜಿಲ್ಲಾ ಅಧಿಕಾರಿಗಳು ಮಂಗಳವಾರ ಬಿಡದಿ ಪಟ್ಟಣದ ಬಳಿಯ ಕೇತಗಾನಹಳ್ಳಿ ಗ್ರಾಮದಲ್ಲಿ ಪೊಲೀಸ್ ರಕ್ಷಣೆಯೊಂದಿಗೆ ಸರ್ವೆ ಕಾರ್ಯ ನಡೆಸಿದ್ದರು.

ಬೆಂಗಳೂರು: 3 ವಲಯಗಳಲ್ಲಿ ಫುಟ್‌ಪಾತ್ ಒತ್ತುವರಿ, ಅನಧಿಕೃತ ಕೇಬಲ್‌ಗಳ ತೆರವು
ದಕ್ಷಿಣ ವಲಯದ ಜಯನಗರ 1ನೇ ಬ್ಲಾಕ್ ನ 3ನೇ ಅಡ್ಡರಸ್ತೆ, ಲಕ್ಕಸಂದ್ರ ವಾರ್ಡ್ ನ 16ನೇ ಅಡ್ಡರಸ್ತೆ ಹಾಗೂ ರಾಜರಾಜೇಶ್ವರಿನಗರ ವಲಯದ ನಾಗರಭಾವಿ 2ನೇ ಹಂತದ 6ನೇ ಅಡ್ಡರಸ್ತೆಯಲ್ಲಿ ಒತ್ತುವರಿ ತೆರವುಗೊಳಿಸಲಾಯಿತು.

ಯಲಹಂಕ: 85 ಕೋಟಿ ರೂ. ಮೌಲ್ಯದ ಆಸ್ತಿಯ ಅಕ್ರಮ ಒತ್ತುವರಿ ತೆರವು!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಯಲಹಂಕದಲ್ಲಿ 2.75 ಎಕರೆ ಪ್ರದೇಶದಲ್ಲಿದ್ದ 85 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಅಕ್ರಮ ಒತ್ತುವರಿಯನ್ನು ಮಂಗಳವಾರ ತೆರವುಗೊಳಿಸಿದ್ದಾರೆ.

ನಾಗಮಂಗಲದ ಸೌಮ್ಯಕೇಶವ ದೇಗುಲದ ಸುತ್ತಲಿನ ಒತ್ತುವರಿ ತೆರವುಗೊಳಿಸಲು ಕರ್ನಾಟಕ ಹೈಕೋರ್ಟ್ ಆದೇಶ
ಅಧಿಕಾರಿಗಳ ನಿಷ್ಕ್ರಿಯತೆಯನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಹೈಕೋರ್ಟ್, ನಾಗಮಂಗಲದ ಸೌಮ್ಯಕೇಶವ ದೇವಸ್ಥಾನದ ಸುತ್ತಲಿನ ಅನಧಿಕೃತ ಮತ್ತು ಅಕ್ರಮ ಒತ್ತುವರಿಗೆ ಸಂಬಂಧಿಸಿದಂತೆ ನೀಡಲಾದ ನೋಟಿಸ್‌ಗಳನ್ನು ಅನುಸರಿಸಿ, ಕಾನೂನು ಪ್ರಕಾರ ತೆರವುಗೊಳಿಸುವಂತೆ ಮಂಡ್ಯ ಜಿಲ್ಲಾಧಿಕಾರಿಗೆ ಸೂಚಿಸಿದೆ.

ವಿಪತ್ತು ನಿರ್ವಹಣಾ, ಕಂದಾಯ ಕಾಯ್ದೆ ಪ್ರಕಾರ ಒತ್ತುವರಿ ತೆರವು: ಬಿಬಿಎಂಪಿ ಮುಖ್ಯ ಆಯುಕ್ತ
ಕಂದಾಯ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ಒತ್ತುವರಿ ತೆರವು ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಗುರುವಾರ ಹೇಳಿದ್ದಾರೆ.

