ರಾಜ್ಯಒಕ್ಕಲಿಗ ಸಮುದಾಯ ನಿಗಮ ಸ್ಥಾಪನೆಗೆ ಸರ್ಕಾರದಿಂದ ಆದೇಶ
2021-22 ನೇ ಸಾಲಿನ ಆಯವ್ಯಯ ಕಂಡಿಕೆ -148 ರಲ್ಲಿ ಹೇಳಿದಂತೆ ರಾಜ್ಯ ಸರ್ಕಾರ ಒಕ್ಕಲಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಿ ಆದೇಶಿಸಿದೆ. ಅದರಂತೆ ನಿಗಮದ ಚಟುವಟಿಕೆಗಳಿಗೆ ರೂ .50.00 ಕೋಟಿ ವೆಚ್ಚ ಮಾಡಲು ಯೋಜಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಇಲಾಖೆ ಆದೇಶದಲ್ಲಿ ತಿಳಿಸಿದೆ.