ರಾಜ್ಯಸಚಿವ ಸುರೇಶ್ ಕುಮಾರ್ ಕಾಳಜಿ: ಐರ್ಲೆಂಡ್ ನಿಂದ ಸುರಕ್ಷಿತವಾಗಿ ಬೆಂಗಳೂರು ತಲುಪಿದ ಕ್ಯಾನ್ಸರ್ ಪೀಡಿತೆ!
ಐರ್ಲೆಂಡ್ ನ ಎಂಎನ್ ಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬೆಂಗಳೂರಿನ 25 ವರ್ಷದ ಕ್ಯಾನ್ಸರ್ ಪೀಡಿತ ಯುವತಿ ವಾಪಸ್ ತವರಿಗೆ ಮರಳಲು ಪರದಾಡುತ್ತಿದ್ದರು. ಆದರೆ ಯುವತಿ ನೆರವಿಗೆ ಧಾವಿಸಿದ ಸಚಿವ ಸುರೇಶ್ ಕುಮಾರ್ ಅವರು ಲಾಕ್ ಡೌನ್ ನಡುವೆಯೇ ಯುವತಿಯನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ.