ರಾಜ್ಯಕೆಪಿಎಸ್ಸಿ 'ಅಕ್ರಮ' ತನಿಖೆ: ಎಸ್ಐಟಿಗೆ ನೇಮಕಗೊಂಡಿದ್ದ ಐಪಿಎಸ್ ಅಧಿಕಾರಿ ದಿಢೀರ್ ವರ್ಗಾವಣೆ; ಅನುಮಾನ ಮೂಡಿಸಿದ ಸರ್ಕಾರದ ನಡೆ
ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC) ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆಗಾಗಿ ಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ (SIT) ಸೆಪ್ಟೆಂಬರ್ 21ರಂದು ಹೈಕೋರ್ಟ್ ನೇಮಿಸಿದ್ದ ಅಧಿಕಾರಿಗಳ ಪೈಕಿ ಚೌಕ್ಸಿ ಕೂಡ ಒಬ್ಬರಾಗಿದ್ದರು.