ದೇಶಷಾ ಭಾಷಾಭಿಮಾನದ ಮಾತದು, ಅವಕಾಶ ಸಿಕ್ಕಿದ್ರೆ ಕನ್ನಡ ಭಾಷೆ ಬಗ್ಗೆ ನಾನೂ ಹೀಗೇ ಮಾತಾಡುತ್ತಿದ್ದೆ: ಸದಾನಂದಗೌಡ
"ಅಮಿತ್ ಷಾ ಹಿಂದಿ ಭಾಷೆಯ ಬಗ್ಗೆ ಅಭಿಮಾನದಿಂದ ಮಾತನಾಡಿದ್ದಾರೆ. ಇದರಲ್ಲಿ ತಪ್ಪೇನೂ ಇಲ್ಲ. ಒಂದೊಮ್ಮೆ ನವದೆಹಲಿಯಲ್ಲೇ ಕನ್ನಡ ಭಾಷಾ ಕಾರ್ಯಕ್ರಮ ನಡೆದು ನಾನು ಅದರಲ್ಲಿ ಭಾಗಿಯಾಗಿದ್ದರೆ ನಾನು ಕನ್ನಡದ ಬಗ್ಗೆ ಸಹ ಇಷ್ಟೇ ಅಭಿಮಾನದಿಂದ ಮಾತನಾಡುತ್ತಿದ್ದೆ. ಕನ್ನಡ ಭಾಷೆಗೆ ಹೆಚ್ಚು ಉತ್ತೇಜನ ನೀಡಬೇಕೆಂದು ಮನವಿ ಮಾಡುತ್ತಿದ್ದೆ. ಏಕೆಂದರೆ ಅದು ಶ್ರೇಷ್ಠವಾದ ಭಾಷೆಯಾಗಿದೆ"