ಏಷ್ಯನ್ ಕುಸ್ತಿ

ಏಷ್ಯನ್ ಕುಸ್ತಿ: ಸಾಕ್ಷಿ ಮಲಿಕ್ ಫೈನಲ್ ಗೆ ಲಗ್ಗೆ, ವಿನೇಶ್ ಪೋಗಟ್ ಗೆ ಪರಾಜಯ
ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ವಿನೇಶ್ ಪೋಗಟ್ ಅವರು ಇಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್ 53 ಕೆ.ಜಿ ವಿಭಾಗದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಜಪಾನ್‌ನ ಮಯು ಮುಕೈಡಾ ವಿರುದ್ಧ ಸೋಲು ಅನುಭವಿಸಿದ್ದಾರೆ.

ಏಷ್ಯನ್ ಕುಸ್ತಿ: ಎರಡನೇ ದಿನ ಭಾರತಕ್ಕೆ ಮೂರು ಕಂಚು
ಬುಧವಾರ - ಏಷ್ಯಾ ಕುಸ್ತಿ ಚಾಂಪಿಯನ್ ಶಿಪ್ ನ ಎರಡನೇ ದಿನ ಭಾರತಕ್ಕೆ ಒಟ್ಟು ಮೂರು ಕಂಚಿನ ಪದಕ ಪ್ರಾಪ್ತಿಯಾಗಿದೆ. ಭಾರತದ ಅಶು ಮತ್ತು ಆದಿತ್ಯ ಕುಂಡು ಕ್ರಮವಾಗಿ 67 ಕೆಜಿ ಮತ್ತು 72 ಕೆಜಿ ಗ್ರೀಕೋ-ರೋಮನ್ ವಿಭಾಗಗಳಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇನ್ನು ಹರ್ದೀಪ್ (97 ಕೆಜಿ) ಸಹ ಪದಕ ಸುತ್ತಿನಲ್ಲಿ ಗೆದ್ದು ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಏಷ್ಯನ್ ಕುಸ್ತಿ: ಸುನೀಲ್ ಗೆ ಬಂಗಾರ, ಕನ್ನಡಿಗ ಅರ್ಜುನ್ ಗೆ ಕಂಚಿನ ಹಾರ
ಗ್ರೀಕೋ ರೋಮನ್ 87 ಕೆಜಿ ವಿಭಾಗದಲ್ಲಿ ಭಾರತದ ಸುನೀಲ್ ಕುಮಾರ್ ಫೈನಲ್ ಪಂದ್ಯ ಗೆದ್ದ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ 27 ವರ್ಷಗಳ ಬಳಿಕ ಭಾರತ ಗ್ರೀಕೋ ರೋಮನ್ ವಿಭಾಗದಲ್ಲಿ ಬಂಗಾರದ ಸಾಧನೆ ಮಾಡಿದೆ.

