ರಾಜ್ಯಏರೋಸ್ಪೇಸ್ ನೀತಿ 2026-31ಕ್ಕೆ ಸಂಪುಟ ಅಸ್ತು: 60,000 ಕೋಟಿ ರೂ ಹೂಡಿಕೆ; 60,000 ಉದ್ಯೋಗ ಸೃಷ್ಟಿ ಗುರಿ
ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ನೀತಿಯು ಇಡೀ ರಾಜ್ಯಕ್ಕೆ ಅನ್ವಯವಾಗಲಿದ್ದು, ಖಾಸಗಿ ಹೂಡಿಕೆ ಆಕರ್ಷಿಸಲು ಆದ್ಯತಾ ಹಾಗೂ ಆದ್ಯತೆಯೇತರ ಪ್ರದೇಶಗಳಿಗೆ ಅನುಗುಣವಾಗಿ ವಿಭಿನ್ನ ಪ್ರೋತ್ಸಾಹಕಗಳನ್ನು ನೀಡಲಾಗುವುದು ಎಂದು ಹೇಳಿದರು.