ಏರೋ ಇಂಡಿಯಾ 2023

Aero India 2023: ಭಾರತ ನಮ್ಮ ಆಯ್ಕೆಯ ಪಾಲುದಾರ- ಅಮೆರಿಕ
ಭಾರತ ನಮ್ಮ ಆಯ್ಕೆಯ ಪಾಲುದಾರ ರಾಷ್ಟ್ರವಾಗಿದ್ದು, ಭಾರತವನ್ನು ಅದರ ಜಿ೨೦ ಅಧ್ಯಕ್ಷತೆಗಾಗಿ ಅಭಿನಂದಿಸುತ್ತೇವೆ ಎಂದು ಅಮೆರಿಕ ಹೇಳಿದೆ.

ಏರೋ ಇಂಡಿಯಾ 2023: ಇಂದು, ನಾಳೆ ಬಳ್ಳಾರಿ ರಸ್ತೆಯಿಂದ ದೂರವಿರುವುದೇ ಉತ್ತಮ
ಗುರುವಾರ ಮತ್ತು ಶುಕ್ರವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಏರೋ ಇಂಡಿಯಾದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿರುವುದರಿಂದ ಬಳ್ಳಾರಿ ರಸ್ತೆಯನ್ನು ಬಳಸದಂತೆ ಪೊಲೀಸರು ಸಾರ್ವಜನಿಕರಿಗೆ ಸೂಚಿಸಿದ್ದಾರೆ.

ವೇಗವಾಗಿ ಬದಲಾಗುತ್ತಿರುವ ಭದ್ರತಾ ಸನ್ನಿವೇಶ ಎದುರಿಸಲು ನೈಜ ಸಮಯದ ಕಾರ್ಯತಂತ್ರದ ಅಗತ್ಯವಿದೆ: ರಾಜನಾಥ್ ಸಿಂಗ್
ಹೆಚ್ಚುತ್ತಿರುವ ಸಂಕೀರ್ಣ ಜಾಗತಿಕ ಭದ್ರತಾ ಸನ್ನಿವೇಶದಲ್ಲಿ ವೇಗದ ಗತಿಯ ಬದಲಾವಣೆಗಳನ್ನು ಎದುರಿಸಲು ಹೆಚ್ಚಿನ ಸಹಕಾರಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೈತ್ರಿ ದೇಶಗಳ ರಕ್ಷಣಾ ಸಚಿವರಿಗೆ ಕರೆ ನೀಡಿದರು.

ಏರೋ ಇಂಡಿಯಾ 2023: ಭಾರತದಲ್ಲಿ ಹೊಸ ಲಾಜಿಸ್ಟಿಕ್ಸ್ ಕೇಂದ್ರ ಸ್ಥಾಪನೆ; ಬೋಯಿಂಗ್ ಮಹತ್ವದ ಘೋಷಣೆ
ಟಾಟಾ ಗ್ರೂಪ್ ಒಡೆತನ ಏರ್ ಇಂಡಿಯಾ ಸಂಸ್ಥೆ ದೊಡ್ಡ ಪ್ರಮಾಣದಲ್ಲಿ ವಿಮಾನಗಳನ್ನು ಖರೀದಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುವಂತೆಯೇ ಇತ್ತ ಜಗತ್ತಿನ ಅತೀ ದೊಡ್ಡ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ಭಾರತದಲ್ಲಿ ತನ್ನ ಹೊಸ ಲಾಜಿಸ್ಟಿಕ್ಸ್ ಕೇಂದ್ರ ಸ್ಥಾಪಿಸುವುದಾಗಿ ಘೋಷಣೆ ಮಾಡಿದೆ.

ಏರೋ ಇಂಡಿಯಾ 2023: ಐತಿಹಾಸಿಕ ನೆಲದಲ್ಲಿ ಏರ್ ಶೋ ನಡೆಯುತ್ತಿರುವುದು ಸಂತಸ ತಂದಿದೆ- ರಾಜನಾಥ್ ಸಿಂಗ್
ಐತಿಹಾಸಿಕ ನೆಲದಲ್ಲಿ ಏರ್ ಶೋ ನಡೆಯುತ್ತಿರುವುದು ಸಂತಸ ತಂದಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.

ಏರೋ ಇಂಡಿಯಾ-2023: ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಕ್ಕೆ ಪ್ರಧಾನಿ ಮೋದಿ ಚಾಲನೆ
ಬೆಂಗಳೂರು ಹೊರವಲಯದಲ್ಲಿರುವ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ 14ನೇ ಆವೃತ್ತಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಚಾಲನೆ ನೀಡಿದ್ದಾರೆ.

ಏರ್ ಶೋ 2023: ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ, ರಾತ್ರಿ ರಾಜಭವನದಲ್ಲೇ ವಾಸ್ತವ್ಯ
2023ರ ಬೆಂಗಳೂರು ಏರ್ ಶೋ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಂಜೆ ಬೆಂಗಳೂರಿಗೆ ಆಗಮಿಸಿದ್ದಾರೆ.

Aero India 2023: ರಾಜಭವನದಲ್ಲಿ ಮೋದಿ ಔತಣಕೂಟ, ರಿಷಬ್ ಶೆಟ್ಟಿ ಸೇರಿ ಹಲವು ಗಣ್ಯರಿಗೆ ಆಹ್ವಾನ
ಏರೋ ಇಂಡಿಯಾ ವೈಮಾನಿಕ ಪ್ರದರ್ಶನ 2023ಕ್ಕೆ ಚಾಲನೆ ನೀಡಲು ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ಮೋದಿ ಭಾನುವಾರ ರಾತ್ರಿ ರಾಜಭವನದಲ್ಲಿ ವಿಶೇಷ ಔತಣಕೂಟದಲ್ಲಿ ಪಾಲ್ಗೊಂಡರು.

ಏರೋ ಇಂಡಿಯಾ 2023: 5 ದಿನಗಳ ಕಾಲ ಸಂಚಾರ ಮಾರ್ಗ ಬದಲಾವಣೆ, ಮಿಟ್ಟಗಾನಹಳ್ಳಿ ಕಸ ವಿಲೇವಾರಿ ಬಂದ್
ನಗರದ ಯಲಹಂಕ ವಾಯುಸೇನಾ ನೆಲೆಯಲ್ಲಿ ಫೆ.13ರಿಂದ 17ರವರೆಗೆ ‘ಏರೋ ಇಂಡಿಯಾ-2023’ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸುಮಗ ಸಂಚಾರಕ್ಕೆ ಅನುವಾಗುವಂತೆ ಪೊಲೀಸರು, ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕವಾಗಿ ಕೆಲ ಬದಲಾವಣೆಗಳನ್ನು ತಂದಿದ್ದಾರೆ.

