ರಾಜ್ಯದಲಿತರ ಶ್ರೇಯೋಭಿವೃದ್ಧಿಗೆ ಎಸ್ಸಿಪಿ/ಟಿಎಸ್ಪಿ: ಕಾಯ್ದೆಯಾಗಿ ಜಾರಿಯಾಗಲಿ, ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಸವಾಲು
ಬಿಜೆಪಿ ದಲಿತ ಮತ್ತು ಶೋಷಿತ ವಿರೋಧಿ ಎಂದು ಆರೋಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ದಲಿತರು ಹಾಗೂ ಬುಡುಕಟ್ಟ ಸಮುದಾಯದ ಶ್ರೇಯೋಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಗಳನ್ನು (ಎಸ್ಸಿಪಿ/ಟಿಎಸ್ಪಿ) ಕಾಯ್ದೆಯಾಗಿ ಜಾರಿಗೆ ತರಲಿ ಎಂದು ಬಿಜೆಪಿ ಮುಖಂಡರು ಹಾಗೂ ಅವರ ಚುನಾಯಿತ ಪ್ರತಿನಿಧಿಗಳಿಗೆ ಸವಾಲು ಹಾಕಿದರು.