ರಾಜ್ಯಗಣ್ಯರ ಮಕ್ಕಳ ಕಾರ್ ಕ್ರೇಜ್: ಕಾರನ್ನು ವಿದ್ಯುತ್ ಕಂಬಕ್ಕೆ ಗುದ್ದಿ ಗ್ರಾಮಸ್ಥರ ಮೇಲೆ ಹಲ್ಲೆಗೆ ಮುಂದಾದ ಶಾಸಕರ ಮೊಮ್ಮಗ
ಗಣ್ಯರ ಮಕ್ಕಳ ಕಾರ್ ಕ್ರೇಜ್ಗೆ ನಡೆಯಬೇಕಿದ್ದ ಭಾರಿ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಬಿಜೆಪಿ ಶಾಸಕ ರವೀಂದ್ರನಾಥ್ ಅವರ ಮೊಮ್ಮಗ ಕಾರನ್ನು ಶಾಮನೂರು ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಬ ಮುರಿದು ಮನೆ ಮೇಲೆ ಬಿದ್ದಿರುವ ಘಟನೆ ಭಾನುವಾರ ತಡ ರಾತ್ರಿ ಸಂಭವಿಸಿದೆ.