ದೇಶ57 ವರ್ಷಗಳ ನಂತರ ಮೊದಲ ಎಲ್ಪಿಜಿ ಸಿಲಿಂಡರ್ ಪಡೆದ ಅರುಣಾಚಲ ಪ್ರದೇಶದ ಗ್ರಾಮ, ಮನೆಮಾಡಿದ ಸಂಭ್ರಮ
ಭಾರತದಲ್ಲಿ ಮೊದಲ ಬಾರಿಗೆ ಎಲ್ಪಿಜಿ ಸಂಪರ್ಕ ಕಲ್ಪಿಸಿದ್ದು 1965ರ ಅಕ್ಟೋಬರ್ 22ರಂದು. ಇಂಡಿಯನ್ ಆಯಿಲ್ ಕಾರ್ಪೊರೇಷನ್ನ ಇಂಡೇನ್ ಕೋಲ್ಕೊತಾದಲ್ಲಿ ಮನೆಗಳಿಗೆ ಅಡುಗೆ ಅನಿಲ ಸಂಪರ್ಕ ಒದಗಿಸಿತು. ಅದಾದ 57 ವರ್ಷಗಳ ನಂತರ ಮ್ಯಾನ್ಮಾರ್ ಗಡಿಯಲ್ಲಿರುವ ಅರುಣಾಚಲ ಪ್ರದೇಶದ ವಿಜಯನಗರ ವೃತ್ತಕ್ಕೆ ಅಡುಗೆ ಅನಿಲ ಸಂಪರ್ಕವನ್ನು ಒದಗಿಸಲಾಗಿದೆ.