ದೇಶಎಲ್ಗರ್ ಪರಿಷದ್ ಪ್ರಕರಣ ಆರೋಪಿಗಳು ದೇಶದ ವಿರುದ್ಧ ಯುದ್ಧ ಸಾರಲು ಬಯಸಿದ್ದರು: ಎನ್ ಐಎಯಿಂದ ಕರಡು ಆರೋಪ ಸಲ್ಲಿಕೆ
ಎಲ್ಗರ್ ಪರಿಷದ್-ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ಮುಂದೆ ಕರಡು ಆರೋಪಪಟ್ಟಿ ಸಲ್ಲಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ), ಆರೋಪಿಗಳು ತಮ್ಮದೇ ಸ್ವಂತ ಸರ್ಕಾರ ರಚಿಸಿ ದೇಶದ ವಿರುದ್ಧ ಯುದ್ಧ ಸಾರಲು ನೋಡಿದ್ದರು ಎಂದು ಪ್ರತಿಪಾದಿಸಿದೆ.