ರಾಜ್ಯಬಿಎಂಟಿಸಿಯಿಂದ 921 ಎಲೆಕ್ಟ್ರಿಕ್ ಬಸ್ ತಯಾರಿಕೆಗೆ ಆರ್ಡರ್ ಪಡೆದ ಟಾಟಾ ಮೋಟಾರ್ಸ್
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ (ಬಿಎಂಟಿಸಿ) 921 ಎಲೆಕ್ಟ್ರಿಕ್ ಬಸ್ಗಳ ತಯಾರಿಕೆಗೆ ಆರ್ಡರ್ ಪಡೆದಿರುವುದಾಗಿ ಟಾಟಾ ಮೋಟಾರ್ಸ್ ಗುರುವಾರ ಪ್ರಕಟಿಸಿದೆ. ಒಪ್ಪಂದದ ಪ್ರಕಾರ, ಕಂಪನಿಯು 12 ವರ್ಷಗಳವರೆಗೆ 12 ಮೀಟರ್ ಎಲೆಕ್ಟ್ರಿಕ್ ಬಸ್ಗಳನ್ನು ಪೂರೈಸುತ್ತದೆ, ಕಾರ್ಯಾಚರಿಸುತ್ತದೆ ಮತ್ತು ನಿರ್ವಹಿಸಲಿದೆ ಎಂದು ತಿಳಿಸಿದೆ.