ದೇಶಕಾಶ್ಮೀರ ಕುರಿತು ಹೇಳಿಕೆ: ನಮ್ಮ ಸಮಗ್ರತೆ-ಸಾರ್ವಭೌಮತ್ವ ಕುರಿತ ಹೇಳಿಕೆಗಳನ್ನು ಸಹಿಸಲ್ಲ; ಟರ್ಕಿ ಅಧ್ಯಕ್ಷರ ವಿರುದ್ಧ ಭಾರತ ಗುಡುಗು
ಭಾರತದ ಆಂತರಿಕ ವಿಷಯಗಳ ಕುರಿತು ಇಂತಹ ಆಕ್ಷೇಪಾರ್ಹ ಹೇಳಿಕೆಗಳನ್ನು ನಾವು ಸಹಿಸುವುದಿಲ್ಲ. ಭಾರತದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವದ ಕುರಿತು ಇಂತಹ ಅನಗತ್ಯ ಹೇಳಿಕೆಗಳು ಸ್ವೀಕಾರಾರ್ಹವಲ್ಲ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ.