ದೇಶ'82 ವರ್ಷದ ಸಿಂಹ ಇನ್ನೂ ಜೀವಂತವಾಗಿದೆ': ಅಜಿತ್ ಪವಾರ್ ಗೆ ಎನ್ ಸಿಪಿ ನಾಯಕರ ತಿರುಗೇಟು
ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ತಮ್ಮ ಚಿಕ್ಕಪ್ಪನ ವಿರುದ್ಧ ಆರೋಪ ಮಾಡಿದ ಬೆನ್ನಲ್ಲೇ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ(NCP) ಶಾಸಕ ಜಿತೇಂದ್ರ ಅವ್ಹಾದ್ ತಿರುಗೇಟು ನೀಡಿದ್ದಾರೆ. ವಯಸ್ಸಾದ ಮಾತ್ರಕ್ಕೆ ಅವರು ರಾಜಕೀಯವಾಗಿ ಶಕ್ತಿಗುಂದಿದ್ದಾರೆ ಎಂದರ್ಥವಲ್ಲ, ಅವರು ರಾಜಕೀಯ ಜೀವನವನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ.