ಎನ್ ಸಿ ಡಬ್ಲ್ಯೂ

ಸೆಕ್ಸ್ ವೀಡಿಯೋ ಪ್ರಕರಣ: ಸಂತ್ರಸ್ತೆಗೆ ಬೆದರಿಕೆ ಕುರಿತು NCW ಮಾಹಿತಿ ಹಂಚಿಕೊಳ್ಳಲು ಗೃಹ ಸಚಿವ ಪರಮೇಶ್ವರ್ ಸೂಚನೆ
ಸೆಕ್ಸ್ ವೀಡಿಯೋ ಪ್ರಕರಣದಲ್ಲಿ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ದಾಖಲಿಸಿರುವ ಸಂತ್ರಸ್ತ ಮಹಿಳೆಗೆ ಬೆದರಿಕೆ ಹಾಕಿರುವ ಕುರಿತು ವಿಶೇಷ ತನಿಖಾ ತಂಡದೊಂದಿಗೆ (ಎಸ್‌ಐಟಿ) ಮಾಹಿತಿ ಹಂಚಿಕೊಳ್ಳುವಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (ಎನ್‌ಸಿಡಬ್ಲ್ಯು) ಸೂಚಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಟ್ವಿಸ್ಟ್: ಪೊಲೀಸರೆಂದು ಹೇಳಿಕೊಂಡ ಮೂವರಿಂದ ಸುಳ್ಳು ದೂರು ದಾಖಲಿಸಲು ಸಂತ್ರಸ್ತೆಗೆ ಒತ್ತಾಯ- NCW
ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಸೆಕ್ಸ್ ವಿಡಿಯೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಜನರ ಗುಂಪೊಂದು ಕಿರುಕುಳ ನೀಡುವುದಾಗಿ ಬೆದರಿಕೆ ಹಾಕಿದ ನಂತರ ಸುಳ್ಳು ದೂರು ದಾಖಲಿಸುವಂತೆ ತನ್ನನ್ನು ಒತ್ತಾಯಿಸಿದ್ದಾಗಿ ಸಂತ್ರಸ್ತೆಯೊಬ್ಬರು ಹೇಳಿರುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗ ಗುರುವಾರ ಹೇಳಿದೆ.

ಮಣಿಪುರದಲ್ಲಿ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ: ವೀಡಿಯೋ ತೆಗೆದುಹಾಕಲು ಟ್ವಿಟರ್ ಗೆ ಎನ್ ಸಿಡಬ್ಲ್ಯೂ ನಿರ್ದೇಶನ
ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಅವರ ಮೇಲೆ ಹಲ್ಲೆ ನಡೆಸಿದ ಅವಮಾನಕರ ಕೃತ್ಯ ತೋರಿಸುವ ವೀಡಿಯೊವನ್ನು ತೆಗೆದು ಹಾಕುವಂತೆ ಟ್ವಿಟರ್ ಇಂಡಿಯಾಗೆ ನಿರ್ದೇಶನ ನೀಡಿರುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗ ಗುರುವಾರ ಹೇಳಿದೆ.

ನೀಟ್ ಪರೀಕ್ಷೆಗೂ ಮುನ್ನ ವಿದ್ಯಾರ್ಥಿನಿಯರಿಗೆ ಒಳ ಉಡುಪು ಕಳಚಿಸಿದ ಆರೋಪ: ಸ್ವತಂತ್ರ ತನಿಖೆಗೆ ಎನ್ ಸಿ ಡಬ್ಲ್ಯೂಆದೇಶ
ಕೇರಳದಲ್ಲಿ ನೀಟ್ ಪರೀಕ್ಷೆಗೂ ಮುನ್ನ ವಿದ್ಯಾರ್ಥಿನಿಯರ ತಪಾಸಣೆ ವೇಳೆಯಲ್ಲಿ ಒಳ ಉಡುಪು ಕಳಚುವಂತೆ ಸೂಚಿಸಲಾಗಿತ್ತು ಎಂಬ ವರದಿಗಳನ್ನು ರಾಷ್ಟ್ರೀಯ ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಿದೆ.

